ರಾಜಸ್ಥಾನದಲ್ಲಿ ಭೀಕರ ಅಪಘಾತ – 6 ಯಾತ್ರಾರ್ಥಿಗಳು ದುರ್ಮರಣ

By
1 Min Read

– ಮೂವರಿಗೆ ಗಂಭೀರ ಗಾಯ

ಜೈಪುರ್: ರಾಜಸ್ಥಾನದ (Rajasthan) ಬುಂಡಿ ಜಿಲ್ಲೆಯಲ್ಲಿ ಮುಂಜಾನೆ ಕಾರು ಮತ್ತು ಅಪರಿಚಿತ ವಾಹನದ ನಡುವೆ ನಡೆದ ಭೀಕರ ಅಪಘಾತದಲ್ಲಿ (Accident) 6 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಅಲ್ಲದೇ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಪುರ ರಾಷ್ಟ್ರೀಯ ಹೆದ್ದಾರಿಯ ಹಿಂದೋಲಿ ಬಳಿ ಮುಂಜಾನೆ 4:30ರ ವೇಳೆಗೆ ಈ ಅಪಘಾತ ನಡೆದಿದೆ. ಯಾತ್ರಿಕರು ಉತ್ತರ ಪ್ರದೇಶದ (Uttar Pradesh) ದೇವಾಸ್ ನಿವಾಸಿಗಳು ಎಂದು ತಿಳಿದು ಬಂದಿದೆ. ಅವರೆಲ್ಲ ಸಿಕಾರ್ ಜಿಲ್ಲೆಯ ಖತು ಶ್ಯಾಮ್ ದೇವಸ್ಥಾನಕ್ಕೆ ತೆರಳುತ್ತಿದ್ದರು. ಇದನ್ನೂ ಓದಿ: ಪರ ಪುರುಷನ ಜೊತೆ ಹಾಸಿಗೆ ಹಂಚಿಕೊಳ್ಳುವಂತೆ ಕಿರುಕುಳ – ನಿರಾಕರಿಸಿದ್ದಕ್ಕೆ ಪತ್ನಿ ಕೊಂದ ಪತಿ

ಮಾರುತಿ ಸುಜುಕಿ ಇಕೋ ಕಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿಗೆ ಡಿಕ್ಕಿಯಾದ ಅಪರಿಚಿತ ವಾಹನದ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದೇವೆ ಎಂದು ಬುಂಡಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉಮಾ ಶರ್ಮಾ ತಿಳಿಸಿದ್ದಾರೆ.

ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೃತದೇಹಗಳ ಗುರುತು ಪತ್ತೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಮೇಲಿನ ಆರೋಪ ನಿರಾಧಾರ: ಶಾಸಕ ಮುನಿರತ್ನ ಸ್ಪಷ್ಟನೆ

Share This Article