ಟೋಕನೈಸೇಶನ್ ಜಾರಿ 6 ತಿಂಗಳು ವಿಳಂಬ: RBI

Public TV
1 Min Read

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ದ ಹೊಸ ಯೋಜನೆ ಟೋಕನೈಸೇಶನ್ ಜನವರಿ 1ರಂದು ಚಲಾವಣೆಗೆ ತರುವ ಬಗ್ಗೆ ಯೋಜಿಸಿತ್ತು. ಆದರೆ ಇದೀಗ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಟೋಕನೈಸ್ ಮಾಡುವ ಹೊಸ ಯೋಜನೆ 6 ತಿಂಗಳವರೆಗೆ ವಿಸ್ತರಿಸಿದೆ.

2022ರ ಜನವರಿ 1 ರಂದು ಜಾರಿಗೆ ಬರಬೇಕಿದ್ದ ಟೋಕನೈಸೇಶನ್ ಆನ್‌ಲೈನ್ ಪಾವತಿಗಳಲ್ಲಿ ಕೆಲವೊಂದು ವಿಷಯಗಳನ್ನು ಅಡ್ಡಿಪಡಿಸುವುದರಿಂದ ಈ ಗಡುವನ್ನು ವಿಸ್ತರಣೆ ಮಾಡಬೇಕು ಎಂದು ಬ್ಯಾಂಕಿಂಗ್ ವಲಯವು ಆರ್‌ಬಿಐಗೆ ಮನವಿ ಸಲ್ಲಿಸಿದೆ. ಹೀಗಾಗಿ ಆರ್‌ಬಿಐ ಈ ಗಡುವನ್ನು ಎರಡನೇ ಬಾರಿ ವಿಸ್ತರಣೆ ಮಾಡಿದೆ. ಇದನ್ನೂ ಓದಿ: ಬೂಸ್ಟರ್ ಡೋಸ್ ಅಗತ್ಯತೆ ಬಗ್ಗೆ ಅಧ್ಯಯನ ನಡೆಸಲು ಮೋದಿ ಸೂಚನೆ

ಇದರ ಜಾರಿಯಿಂದ ಸೈಬರ್ ಅಪರಾಧ ಹಾಗೂ ಹ್ಯಾಕಿಂಗ್‌ಗಳಂತಹ ಸಮಸ್ಯೆಗಳು ದೂರವಾಗುವ ಸಾಧ್ಯತೆಗಳಿದ್ದರೂ ಇದೀಗ ಟೋಕನೈಸೇಶನ್ ಜಾರಿಗೆ ತರುವಲ್ಲಿ ವಿಳಂಬವಾಗಿದೆ.

ಆರ್‌ಬಿಐ 2022ರ ಜನವರಿ 1ರಂದು ಟೋಕನೈಸೇಶನ್ ಜಾರಿಗೆ ಬರುವುದಿಲ್ಲ. ಬದಲಾಗಿ 2022ರ ಜುಲೈ 1ರಿಂದ ಜಾರಿಗೊಳಿಸಲಾಗುವುದು. 2022ರ ಜೂನ್ 30ರ ನಂತರ ಕಾರ್ಡ್ ವಿವರಗಳನ್ನು ಕೇವಲ ವಿತರಣಾ ಕಂಪನಿಗಳು ಮಾತ್ರವೇ ಸಂಗ್ರಹಿಸಿ ಇಟ್ಟುಕೊಳ್ಳಲಿದ್ದು, ಬೇರೆಡೆ ಸಂಗ್ರಹಿಸಿ ಇಡಲಾದ ಕಾರ್ಡ್ ವಿವರಗಳನ್ನು ನಾಶಪಡಿಸುವುದಾಗಿ ಆರ್‌ಬಿಐ ತಿಳಿಸಿದೆ. ಇದನ್ನೂ ಓದಿ: ಇನ್ನು ಮುಂದೆ ಸುಲಭವಾಗಿ ಆನ್‌ಲೈನ್ ಶಾಪಿಂಗ್ – ಏನಿದು ಟೋಕನೈಸೇಶನ್?

ಜನರು ಆನ್‌ಲೈನ್‌ನಲ್ಲಿ ಖರೀದಿ ಮಾಡುವಾಗ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ವಿವರವನ್ನು ನೀಡುವ ಅವಶ್ಯಕತೆ ಇರುತ್ತಿತ್ತು. ಈ ಸಂದರ್ಭದಲ್ಲಿ ಬಳಕೆದಾರರಿಗೆ ತಮ್ಮ ವೈಯಕ್ತಿಕ ವಿವರಗಳು ಸೋರಿಕೆಯಾಗುವ ಭೀತಿಯೂ ಇತ್ತು. ಇದಕ್ಕೆ ಪರಿಹಾರವಾಗಿ ಆರ್‌ಬಿಐ ಟೋಕನೈಸೇಶನ್ ಯೋಜನೆಯನ್ನು ಜಾರಿಗೊಳಿಸುವುದಾಗಿ ತಿಳಿಸಿತ್ತು.

ಟೋಕನೈಸೇಶನ್ ಬಳಕೆಯಿಂದ ಆನ್‌ಲೈನ್ ಪಾವತಿಗಳಲ್ಲಿ ಕಾರ್ಡ್‌ಗಳ ವಿವರ ನೀಡುವ ಅಗತ್ಯ ಬೀಳುವುದಿಲ್ಲ. ಇದಕ್ಕಾಗಿ ಬಳಕೆದಾರರು ತಮ್ಮ ಕಾರ್ಡ್‌ಗಳನ್ನು ಟೋಕನ್‌ಗಳಾಗಿ ಪರಿವರ್ತಿಸಿ ಬಳಕೆ ಮಾಡುವ ಬಗ್ಗೆ ತಿಳಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *