ಮೈಸೂರು: ಒಣಗಿದ ದಾಸವಾಳ ಹೂ (Hibiscus Flower) ನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಮೈಸೂರು (Mysuru) ಜಿಲ್ಲೆಯ ಹುಣಸೂರು (Hunsur) ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ.
ಮನೆಯ ಹೊಸಲಿನಲ್ಲಿ ಪೂಜೆಗೆ ಇರಿಸಿದ್ದ ದಾಸವಾಳದ ಹೂವನ್ನು ಆರೂವರೆ ತಿಂಗಳ ಮಗು ನುಂಗಿದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದೆ. ದೊಡ್ಡಹೆಜ್ಜೂರಿನ ಸುದರ್ಶನ್-ನವ್ಯ ದಂಪತಿಯ ಎರಡನೇ ಪುತ್ರ ಆರೂವರೆ ತಿಂಗಳ ಚಿನ್ಮಯಿಗೌಡ ಸಾವನ್ನಪ್ಪಿದ ಮಗು. ಇದನ್ನೂ ಓದಿ: ಜನರಿಗೆ ಶಾಕ್ ಮೇಲೆ ಶಾಕ್ – ಲೀಟರ್ ಪೆಟ್ರೋಲ್ ಬೆಲೆ 6 ರೂ., ಡೀಸೆಲ್ 7 ರೂ. ಹೆಚ್ಚಳ
ತನ್ನ ಅಣ್ಣನೊಂದಿಗೆ ಆಟವಾಡುತ್ತಿದ್ದ ಚಿನ್ಮಿಯಿಗೌಡ, ಮನೆಯ ಹೊಸಲಿಗೆ ಪೂಜೆಗೆ ಇಟ್ಟಿದ್ದ ದಾಸವಾಳದ ಹೂವಿನ ತುಂಡನ್ನು ಬಾಯಿಗೆ ಹಾಕಿಕೊಂಡಿದೆ. ಈ ವೇಳೆ ಅಣ್ಣ ಕಿತ್ತುಕೊಳ್ಳುತ್ತಾನೆಂದು ಮಗು ಒಣಗಿದ ಹೂವನ್ನು ನುಂಗಿದ್ದರಿಂದ ಉಸಿರಾಟದ ತೊಂದರೆಯಾಗಿ ಅಸ್ವಸ್ಥಗೊಂಡಿದೆ. ಇದನ್ನೂ ಓದಿ: ಬಹುನಿರೀಕ್ಷಿತ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ಗೆ ಟೆಂಡರ್ ಆಹ್ವಾನಿಸಿದ ಬಿಡಿಎ
ತಕ್ಷಣವೇ ಹನಗೋಡಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಇದನ್ನೂ ಓದಿ: 2027 ರ ಜನಗಣತಿ ಪ್ರಯುಕ್ತ ರಾಜ್ಯದಲ್ಲಿ ಏ.1 ರಿಂದ ಮನೆ ಗಣತಿ

