ಬೆಂಗಳೂರು: ಹುಟ್ಟಿದ ಆರೇ ತಿಂಗಳಿಗೆ ಮಗು ಸಾವಪ್ಪಿನದ ಕಾರಣ ಮನನೊಂದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಎಸ್.ಜಿ ಪಾಳ್ಯದ ತಾವರೆಕೆರೆಯಲ್ಲಿ ನಡೆದಿದೆ.
ಮಂಡ್ಯ ಮೂಲದ ಪಲ್ಲವಿ ಆತ್ಮಹತ್ಯೆಗೆ ಶರಣಾದ ತಾಯಿ. ಸಿದ್ದು ಎಂಬಾತನ ಜೊತೆ ಕಳೆದ ನಾಲ್ಕು ವರ್ಷಗಳಿಂದ ಪಲ್ಲವಿ ವಿವಾಹವಾಗಿತ್ತು. ಬಳಿಕ ಗರ್ಭಿಣಿಯಾದ ಆಕೆಗೆ ಗರ್ಭಪಾತವಾಗಿತ್ತು. ಆ ಬಳಿಕ ಹಲವು ದೇವರಿಗೆ ಹರಕೆ ಹೊತ್ತು ಗರ್ಭಿಣಿಯಾಗಿದ್ದರು. ಆದರೆ ಹುಟ್ಟಿದ ಮಗುವಿಗೆ ಹೃದಯದಲ್ಲಿ ರಂದ್ರ ಇರುವುದು ಪತ್ತೆಯಾಗಿದೆ. ಸಿದ್ದು ಆಸ್ಪತ್ರೆಯೊಂದರಲ್ಲಿ ಕೆಲಸಕ್ಕಿದ್ದರು ಅದೇ ಆಸ್ಪತ್ರೆಯಲ್ಲಿ ಮಗು ಬದುಕಿಸಲು ಪ್ರಯತ್ನ ಪಟ್ಟಿದ್ದರು. ಆದರೆ ನಿನ್ನೆ ಬೆಳಗ್ಗೆ ಮನೆಯಲ್ಲಿ ಮಲಗಿದ್ದ ವೇಳೆ ಮಗು ಸಾವನ್ನಪ್ಪಿದೆ. ಬಳಿಕ ಮಗು ಕಳೆದುಕೊಂಡ ನೋವಿನಲ್ಲಿ ಡೆತ್ ನೋಟ್ ಬರೆದಿಟ್ಟು ಪಲ್ಲವಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಪಿಸ್ತೂಲ್ ಕಸಿದುಕೊಂಡು ಪೊಲೀಸರ ಮೇಲೆ ದಾಳಿ ಮಾಡಿದ ಆರೋಪಿ..!
ಸಿದ್ದು ಎಂದಿನಂತೆ ಕೆಲಸಕ್ಕೆ ತೆರಳಿದ್ದರು ಬಳಿಕ ಸಂಜೆ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಪೊಲೀಸರಿಗೆ ಮಾಹಿತಿ ತಿಳಿಸದೆ ಊರಿಗೆ ಮೃತದೇಹಗಳನ್ನು ಕರೆದುಕೊಂಡು ಹೋಗಲು ಮುಂದಾಗಿದ್ದರು. ಈ ವೇಳೆ ಮೃತರ ಕುಟುಂಬಸ್ಥರು ಆಕ್ಷೇಪವೆತ್ತಿ ಸಾವಿನ ಹಿಂದೆ ಕೊಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸುದ್ದಗುಂಟೆ ಪಾಳ್ಯ ಪೊಲೀಸರಿಂದ ಪ್ರಕರಣ ಕೂಡ ದಾಖಲಿಸಿದ್ದಾರೆ. ಕುಟುಂಬಸ್ಥರ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: 13ರ ಬಾಲಕಿ ಮೇಲೆ 16 ಮಂದಿಯಿಂದ ಸಾಮೂಹಿಕ ಅತ್ಯಾಚಾರ – ನೋವಿನ ಕಥೆ ಬಿಚ್ಚಿಟ್ಟ ತಂದೆ!