ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) 6 ಶಾಲೆಗಳಿಗೆ (Schools) ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ದೆಹಲಿಯ ಆರು ಶಾಲೆಗಳಿಗೆ ಬೆಳಗ್ಗೆ 6:35 ರಿಂದ 7:48ರ ನಡುವೆ ಬಾಂಬ್ ಬೆದರಿಕೆಗೆ (Bomb Threat) ಸಂಬಂಧಿಸಿದ ಕರೆಗಳು, ಇಮೇಲ್ ಬಂದಿವೆ. ಇವುಗಳಲ್ಲಿ ಪ್ರಸಾದ್ ನಗರದಲ್ಲಿರುವ ಆಂಧ್ರ ಶಾಲೆ, ಬಿಜಿಎಸ್ ಇಂಟರ್‌ನ್ಯಾಷನಲ್ ಶಾಲೆ, ರಾವ್ ಮಾನ್ ಸಿಂಗ್ ಶಾಲೆ, ಕಾನ್ವೆಂಟ್ ಶಾಲೆ, ಮ್ಯಾಕ್ಸ್ ಫೋರ್ಟ್ ಶಾಲೆ ಮತ್ತು ದ್ವಾರಕಾದ ಇಂದ್ರಪ್ರಸ್ಥ ಅಂತರರಾಷ್ಟ್ರೀಯ ಶಾಲೆಗಳಿಗೆ ಬೆದರಿಕೆ ಕರೆಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಿಎಲ್ ಸಂತೋಷ್ ವಿರುದ್ಧ ಅವಹೇಳನ – ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್ ವಶಕ್ಕೆ
ಅಗ್ನಿಶಾಮಕ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ದಳಗಳೊಂದಿಗೆ ಪೊಲೀಸ್ ತಂಡಗಳು ತಕ್ಷಣ ಆವರಣಕ್ಕೆ ಧಾವಿಸಿ, ಶೋಧ ಕಾರ್ಯ ನಡೆಸುತ್ತಿವೆ. ಇದನ್ನೂ ಓದಿ: ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ ರಹಸ್ಯ ಬಯಲು – ಪ್ರಿಯತಮನಿಂದಲೇ ಸ್ಕೆಚ್; ಮರ್ಮ ಅರಿಯದೇ ಹೊರಟಿದ್ದಳು ಮುಗ್ಧೆ
ಇದೀಗ ಒಂದೇ ವಾರದಲ್ಲಿ ಮೂರು ಬಾರಿ ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ಆ.18 ರಂದು ದೆಹಲಿಯಾದ್ಯಂತ 32 ಶಾಲೆಗಳಿಗೆ ಇದೇ ರೀತಿಯ ಬೆದರಿಕೆಗಳು ಬಂದಿದ್ದವು. ನಿನ್ನೆ (ಆ.20) 50 ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿ 25,000 ಅಮೆರಿಕನ್ ಡಾಲರ್‌ಗೆ ಬೇಡಿಕೆ ಇಟ್ಟಿದ್ದರು. ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಇವು ಹುಸಿ ಬಾಂಬ್ ಬೆದರಿಕೆಗಳು ಎಂದು ತಿಳಿದುಬಂದಿತ್ತು.