ಬಿಡಿಎದಿಂದ ಕರಗ ಮಂಟಪ ಅಭಿವೃದ್ಧಿಗೆ 6 ಕೋಟಿ ರೂ.: ಎಸ್.ಆರ್ ವಿಶ್ವನಾಥ್

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ವಿಶ್ವವಿಖ್ಯಾತ ಕರಗ ಮಂಟಪವನ್ನು ಬಿಡಿಎ 6 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಿದೆ ಎಂದು ಬಿಡಿಎ ಅಧ್ಯಕ್ಷ ಮತ್ತು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ (S.R Vishwanath) ತಿಳಿಸಿದ್ದಾರೆ.

ಹೆಸರಘಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಗಳ ಸಮುದಾಯದ ವತಿಯಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಿಗಳ ಸಮುದಾಯದವರು ಬೆಂಗಳೂರು ಐತಿಹಾಸಿಕ ಕರಗದ ರುವಾರಿಗಳು. ಕ್ಷತ್ರಿಯ ಪರಂಪರೆಯಂತೆಯೇ ತಿಗಳ ಜನಾಂಗ ಕೊಟ್ಟ ಮಾತಿಗೆ ತಪ್ಪುವವರಲ್ಲ. ವ್ಯವಸಾಯ ಮತ್ತು ವ್ಯವಸಾಯೇತರ ಉಪಕಸುಬುಗಳ ಮೂಲಕ ಬದುಕು ಕಟ್ಟಿಕೊಂಡಿರುವ ಕಷ್ಟಜೀವಿಗಳು. ಭಾರತೀಯ ರಾಜ ಮಹಾರಾಜರ ಕಾಲದಲ್ಲಿ ಸೈನ್ಯದಲ್ಲಿ ತಿಗಳ ಸಮುದಾಯ ಮತ್ತು ಬೇಡ ಸಮುದಾಯದ ವಿಶೇಷ ಸೇನಾ ಪಡೆಗಳಿದ್ದು, ಇವರ ಸೇನಾ ಪಡೆಗಳಿಗೆ ವಿಶೇಷ ಪ್ರಾಶಸ್ತ್ಯವಿತ್ತು. ಏಕೆಂದರೆ ಈ ಜನಾಂಗದವರು ಮುಂದಿಟ್ಟ ಹೆಜ್ಜೆ ಇಂದಿಡುವ ಜಾಯಮಾನದವರಲ್ಲ ಎಂಬ ಪ್ರತೀತಿ ಆದಿಕಾಲದಿಂದಲೂ ಇದ್ದು, ಅಚಲವಾದ ಎದೆಗಾರಿಕೆ ಹೊಂದಿರುವ ಸಮುದಾಯವೆಂದು ಖ್ಯಾತಿ ಪಡೆದಿದೆ ಎಂದು ಜನಾಂಗದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಾಸನ ಟಿಕೆಟ್ ಫೈಟ್‍ಗೆ ಮೂರನೇ ವ್ಯಕ್ತಿ ಎಂಟ್ರಿ- ರಾಜೇಗೌಡ ಪರ ರೇವಣ್ಣ ಫ್ಯಾಮಿಲಿ ಬ್ಯಾಟಿಂಗ್

ತಿಗಳ ಸಮುದಾಯದ ಏಳಿಗೆಗಾಗಿ ಅವರ ಮನವಿಯಂತೆ ಯಲಹಂಕ (Yalahanka) ದಲ್ಲಿ 4 ಕೋಟಿ ರೂ.ವೆಚ್ಚದಲ್ಲಿ ಕರಗ ಮಂಟಪ ನಿರ್ಮಿಸಿ ಕೊಡುವುದರ ಜೊತೆಗೆ ಕಲ್ಯಾಣಿ ಅಭಿವೃದ್ಧಿ ಪಡಿಸಿಕೊಟ್ಟಿದ್ದೇನೆ. ಬೆಂಗಳೂರು ಕರಗ ಮಂಟಪದ ಅಭಿವೃದ್ಧಿಗೂ ಸಹ ಬಿಡಿಎದಿಂದ 6 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಯಲಹಂಕ ಕ್ಷೇತ್ರದಲ್ಲಿ ಎಲ್ಲಾ ಜನಾಂಗದವರಿಗೂ ಸಮುದಾಯ ಭವನ ನಿರ್ಮಿಸಿ ಕೊಟ್ಟಿರುವಂತೆಯೇ ತಿಗಳ ಜನಾಂಗಕ್ಕೂ ಸಹ ಸಮುದಾಯ ಭವನ ನಿರ್ಮಾಣ ಮಾಡಿಕೊಡುವುದರ ಜೊತೆಗೆ ಹೆಚ್ಚುವರಿ ಇನ್ನೊಂದು ಎಕರೆ ಜಮೀನು ನೀಡಿ ಅದರಲ್ಲಿ ತಿಗಳ ಸಮುದಾಯದ ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು. ತಿಗಳ ಸಮುದಾಯದ ಮುಖಂಡರು, ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *