ಕ್ಯಾಂಪಸ್‌ನಲ್ಲಿ ಲವ್‌ಜಿಹಾದ್‌ಗೆ ಉತ್ತೇಜನ, ಸೇನೆಗೆ ಅಪಮಾನ – 6 ಶಿಕ್ಷಕರಿಗೆ ಪಾಠ ಮಾಡದಂತೆ ಸೂಚನೆ

Public TV
2 Min Read

ಇಂದೋರ್: ಕಾಲೇಜಿನಲ್ಲಿ ಲವ್ ಜಿಹಾದ್ (Love Jihad), ಮಾಂಸಾಹಾರಕ್ಕೆ ಉತ್ತೇಜನ, ಸರ್ಕಾರ ಹಾಗೂ ಸೇನೆಯ (Army) ಬಗ್ಗೆ ನಕಾರಾತ್ಮಕ ಆಲೋಚನೆಗಳನ್ನು ಉತ್ತೇಜಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಇಂದೋರ್ ಸರ್ಕಾರಿ ಕಾನೂನು ಕಾಲೇಜಿನ (Indore law College) 6 ಮಂದಿ ಶಿಕ್ಷಕರ (Teachers) ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ನಾಲ್ವರು ಮುಸ್ಲಿಂ (Muslims) ಹಾಗೂ ಇಬ್ಬರು ಹಿಂದೂ ಶಿಕ್ಷಕರು ಸೇರಿದಂತೆ 6 ಶಿಕ್ಷಕರನ್ನು ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಳಪಡಿಸಲಾಗಿದೆ. ಇವರು ಮುಂದಿನ 5 ದಿನಗಳ ಕಾಲ ತರಗತಿಯಲ್ಲಿ ಪಾಠ ಮಾಡದಂತೆ ಕಾಲೇಜು ಆಡಳಿತ ಮಂಡಳಿ ಸೂಚಿಸಿದೆ. ಇದನ್ನೂ ಓದಿ: ವಿದ್ಯಾರ್ಥಿನಿ ಶೂಟ್‌ ಮಾಡಿ ಅತ್ಯಾಚಾರವೆಸಗಿ ಕೊಂದ – ಮೃತದೇಹ ಪೀಸ್‌ ಮಾಡಿ ತಿಂದಿದ್ದ ವ್ಯಕ್ತಿ ನಿಧನ

ಏನಿದು ಘಟನೆ?
ಬಿಜೆಪಿಯ (BJP) ವಿದ್ಯಾರ್ಥಿಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸದಸ್ಯರು ನಾಲ್ವರು ಮುಸ್ಲಿಂ ಹಾಗೂ ಇಬ್ಬರು ಹಿಂದೂ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇಲ್ಲಿನ ಸರ್ಕಾರಿ ಕಾನೂನು ಕಾಲೇಜು ಆವರಣದಲ್ಲಿ ಗದ್ದಲ ನಡೆಸಿದ್ದರು. ಈ ವೇಳೆ ಎಬಿವಿಪಿ ಘಟಕದ ಮುಖ್ಯಸ್ಥ ದೀಪೇಂದ್ರ ಠಾಕೂರ್ ಅವರು ಶಿಕ್ಷಕರ ವಿರುದ್ಧ ಪ್ರಾಂಶುಪಾಲ ಡಾ. ಇನಾಮೂರ್ ರೆಹಮಾನ್ ಅವರಿಗೆ ದೂರು ನೀಡಿದ್ದರು. ಇದನ್ನೂ ಓದಿ: ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಬಿಎಸ್‌ವೈ ಭಾಗಿ

ಸಾಂದರ್ಭಿಕ ಚಿತ್ರ

ಕೆಲವು ಶಿಕ್ಷಕರು ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಧಾರ್ಮಿಕ ಮೂಲಭೂತವಾದ, ಸರ್ಕಾರ ಹಾಗೂ ಭಾರತೀಯ ಸೇನೆಯ ಬಗ್ಗೆ ನಕಾರಾತ್ಮಕ ಚಿಂತನೆಗಳನ್ನ ಉತ್ತೇಜಿಸುತ್ತಿದ್ದಾರೆ. ಅಲ್ಲದೇ ಶುಕ್ರವಾರ ದಿನಗಳಂದು ಮುಸ್ಲಿಂ ಶಿಕ್ಷಕರು (Muslim Teachers) ಹಾಗೂ ವಿದ್ಯಾರ್ಥಿಗಳು ನಮಾಜ್ ಮಾಡುತ್ತಾರೆ. ಆ ಸಂರ್ಭಗಳಲ್ಲಿ ತರಗತಿಗಳು ನಡೆಯುವುದಿಲ್ಲ. ಅಲ್ಲದೇ ಕ್ಯಾಂಪಸ್‌ಗಳಲ್ಲಿ ಲವ್ ಜಿಹಾದ್ ಹಾಗೂ ಮಾಂಸಾಹಾರವನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದ್ದರು.

ದೂರಿನ ಅನ್ವಯ ಪ್ರಾಂಶುಪಾಲರಿಗೆ ಜಿಲ್ಲಾ ನ್ಯಾಯಾಧೀಶರಿಂದ ತನಿಖೆ ನಡೆಸಲು ನಿರ್ಧರಿಸಿದ್ದು, ವಿಚಾರಣೆಯನ್ನು ಪ್ರಾಂಶುಪಾಲರು ನ್ಯಾಯಾಂಗ ತನಿಖೆಗೆ ವಹಿಸಿದ್ದಾರೆ.

ಕಾಲೇಜಿನಲ್ಲಿ ಅಂತಹ ವಾತಾವರಣ ಇಲ್ಲ. ಆದಾಗ್ಯೋ ಅವರನ್ನು ತಾತ್ಕಾಲಿಕವಾಗಿ ಮನೆಗೆ ಕಳುಹಿಸಲಾಗಿದೆ. ತನಿಖೆ ನಡೆಯುವ ಮುಂದಿನ ಐದು ದಿನಗಳವರೆಗೆ ಅವರು ತರಗತಿಯಲ್ಲಿ ಪಾಠ ಮಾಡುವುದಿಲ್ಲ ಎಂದು ಪ್ರಾಂಶುಪಾಲರು ಸ್ಪಷ್ಟನೆ ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article