ಮುಂದಿನ ವರ್ಷದಿಂದ ಕಾರುಗಳಲ್ಲಿ 6 ಏರ್‌ಬ್ಯಾಗ್ ನಿಯಮ ಜಾರಿಗೆ – ನಿತಿನ್ ಗಡ್ಕರಿ

Public TV
1 Min Read

ನವದೆಹಲಿ: ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ಪ್ರಯಾಣಿಕ ಕಾರುಗಳಿಗೆ 6 ಏರ್‌ಬ್ಯಾಗ್ (Airbag) ನಿಯಮ ಜಾರಿಗೆ ಬರಲಿದೆ  ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ.

ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ಪ್ರಯಾಣಿಕ ಕಾರುಗಳಿಗೆ 6 ಏರ್‌ಬ್ಯಾಗ್ ನಿಯಮ ಜಾರಿಗೆ ಬರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿಮ್ ಕಾರ್ಡ್, ಒಟಿಟಿ ಸೇವೆಗೆ ನಕಲಿ ದಾಖಲೆ ಕೊಟ್ರೆ ಬೀಳುತ್ತೆ 50 ಸಾವಿರ ದಂಡ,1 ವರ್ಷ ಜೈಲು

2022ರ ಅಕ್ಟೋಬರ್ 1ರಿಂದ ಕಾರಿನ ಎಲ್ಲಾ ಸೀಟ್‍ಗಳಲ್ಲಿಯೂ ಏರ್‌ಬ್ಯಾಗ್‍ಗಳನ್ನು ಕಡ್ಡಾಯಗೊಳಿಸುವಂತೆ ಸರ್ಕಾರ ಈ ಹಿಂದೆ ತಿಳಿಸಿತ್ತು. ವಾಹನಗಳಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆಯಾಗಿದೆ ಎಂದು ಗಡ್ಕರಿ ಹೇಳಿದ್ದಾರೆ. ಇದನ್ನೂ ಓದಿ: ಬ್ಯಾನ್ ಆದ ಪಿಎಫ್‌ಐ ಹೆಸರಲ್ಲಿ ಚಟುವಟಿಕೆ ನಡೆಸಿದ್ರೆ ಕಾನೂನು ಕ್ರಮ: ಆರಗ ಜ್ಞಾನೇಂದ್ರ

ಆಟೋ ಉದ್ಯಮವು (Auto Industry) ಎದುರಿಸುತ್ತಿರುವ ಜಾಗತಿಕ ಪೂರೈಕೆ ಸರಪಳಿಯ ನಿರ್ಬಂಧಗಳು ಮತ್ತು ಸ್ಥೂಲ ಆರ್ಥಿಕ ಸನ್ನಿವೇಶದ ಮೇಲೆ ಅದರ ಪ್ರಭಾವವನ್ನು ಬೀರುತ್ತದೆ. ಪ್ಯಾಸೆಂಜರ್ ಕಾರ್‌ಗಳಲ್ಲಿ (M-1 ವರ್ಗ) ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಪ್ರಸ್ತಾಪವನ್ನು 2022ರ ಅಕ್ಟೋಬರ್ 1 ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *