ಟರ್ಕಿಯಲ್ಲಿ 6.1 ತೀವ್ರತೆಯ ಭೂಕಂಪ – ಓರ್ವ ಸಾವು, 29 ಮಂದಿಗೆ ಗಾಯ

Public TV
1 Min Read

– ಇಸ್ತಾಂಬುಲ್‌ನಲ್ಲೂ ಕಂಪಿಸಿದ ಭೂಮಿ

ಅಂಕಾರಾ: ಭೂಕಂಪ ಪೀಡಿತ ರಾಷ್ಟ್ರವಾದ ಟರ್ಕಿಯ (Turkey) ವಾಯುವ್ಯ ಪ್ರಾಂತ್ಯ ಬಲಿಕೆಸಿರ್ (Balikesir) ಎಂಬಲ್ಲಿ ಭಾನುವಾರ ಸಂಜೆ (ಆ.10) 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಪರಿಣಾಮ ಓರ್ವ ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ.

ಬಲಿಕೆಸಿರ್ ಪ್ರಾಂತ್ಯದ ಸಿಂದಿರಗಿಯಲ್ಲಿ 11 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಪರಿಣಾಮ 200 ಕಿ.ಮೀ. ದೂರದ ಇಸ್ತಾಂಬುಲ್ ಮತ್ತು ಇಜ್ಜಿರ್‌ನಲ್ಲೂ ಕಂಪನದ ಅನುಭವ ಆಗಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ದರ್ಶನ್ ಸಿನಿ ಜರ್ನಿಗೆ 28 ವರ್ಷ: ‘ಡಿ’ ಫ್ಯಾನ್ಸ್ ಸಂಭ್ರಮ

ಪ್ರಬಲ ಭೂಕಂಪದ ಬೆನ್ನಲ್ಲೇ ಟರ್ಕಿಯ ವಿಪತ್ತು ಮತ್ತು ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆ, ಸುರಕ್ಷತೆಯ ದೃಷ್ಟಿಯಿಂದ ನೆಲಕಚ್ಚಿದ ಕಟ್ಟಡಗಳನ್ನು ಪ್ರವೇಶಿಸದಂತೆ ಸಾರ್ವಜನಿಕರಿಗೆ ಸೂಚಿಸಿದೆ.

ಸಿಂದಿರಗಿಯಲ್ಲಿ 14ಕ್ಕೂ ಅಧಿಕ ಕಟ್ಟಡಗಳು ಧರೆಗುರುಳಿದ್ದು, ಅವುಗಳಲ್ಲಿದ್ದ 4 ಜನರನ್ನು ಈಗಾಗಲೇ ರಕ್ಷಿಸಲಾಗಿದೆ. ಅವಶೇಷಗಳ ಅಡಿ ಸಿಲುಕಿರುವ 2 ಮಂದಿಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 81 ವರ್ಷದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ.ಇದನ್ನೂ ಓದಿ: ರಾಯರು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 354 ವರ್ಷ: ಮಂತ್ರಾಲಯದಲ್ಲಿ ಮಧ್ಯಾರಾಧನೆ ಸಂಭ್ರಮ

Share This Article