– ಕೇಂದ್ರದಿಂದ ಅಗತ್ಯವಿರುವ ಎಲ್ಲಾ ಸಹಾಯ ನೀಡುವುದಾಗಿ ಮೋದಿ ಭರವಸೆ
– ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ; 150 ಮಂದಿ ಸ್ಥಳಾಂತರ
ಡೆಹ್ರಾಡೂನ್: ಉತ್ತರಕಾಶಿಯ ಧರಾಲೀಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದ (Uttarkashi Cloudburst) ಪ್ರವಾಹದಲ್ಲಿ ಸಿಲುಕಿಕೊಂಡವರ ರಕ್ಷಣಾ ಕಾರ್ಯವನ್ನ ಭಾರತೀಯ ಸೇನೆ (Indian Army), ಐಟಿಬಿಪಿ ಹಾಗೂ ಎನ್‌ಡಿಆರ್‌ಎಫ್ ತಂಡಗಳು ಆರಂಭಿಸಿವೆ. ಭಾರೀ ಮಳೆಯ ನಡುವೆಯೂ 150 ಮಂದಿಯನ್ನ ರಕ್ಷಿಸಲಾಗಿದೆ. ಇನ್ನೂ 150ಕ್ಕೂ ಹೆಚ್ಚುಮಂದಿಯನ್ನು ಪ್ರವಾಹಪೀಡಿತ ಸ್ಥಳದಿಂದ ರಕ್ಷಿಸಲಾಗಿದೆ.
ಅಲ್ಲದೇ ಪ್ರವಾಹದಿಂದಾಗಿ ಈವರೆಗೆ ಐವರು ಸಾವನ್ನಪ್ಪಿರುವುದು ದೃಢವಾಗಿದೆ. ಐವರ ಮೃಹದೇಹಗಳನ್ನೂ ಹೊರತೆಗೆಯಲಾಗಿದೆ. ಕೇರಳದ 28 ಪ್ರವಾಸಿಗರೂ ಸೇರಿ 100ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಯುತ್ತಿದೆ. ಇದನ್ನೂ ಓದಿ: ಉತ್ತರಕಾಶಿ ಮೇಘಸ್ಫೋಟ | ಕೊಚ್ಚಿ ಹೋದ ಗ್ರಾಮ – ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
उत्तरकाशी में आपदा प्रभावित क्षेत्र का हवाई निरीक्षण किया।#Uttarkashi pic.twitter.com/IFnrxRkegD
— Pushkar Singh Dhami (@pushkardhami) August 6, 2025
ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ
ಇನ್ನೂ ಮೇಘಸ್ಫೋಟದಿಂದ ಪ್ರವಾಹ ಸಂಭವಿಸಿದ ಸ್ಥಳವನ್ನ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಕೂಡ ಹಂಚಿಕೊಂಡಿದ್ದು, ಸಮರೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನ ಕೈಗೊಳ್ಳಲಾಗುತ್ತಿದೆ. ಸಂತ್ರಸ್ತರಿಗೆ ತ್ವರಿತ ಸಹಾಯವನ್ನೂ ನೀಡುತ್ತಿದ್ದೇವೆ ಎಂದು ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿರುವ 6,291 ಪ್ರಾಥಮಿಕ ಕೃಷಿ ಸಾಲ ಸಂಘಗಳಲ್ಲಿ 125 ಸಂಘಗಳು ದಿವಾಳಿ ಅಂಚಿನಲ್ಲಿವೆ: ಅಮಿತ್ ಶಾ
ಪ್ರಧಾನಿ ಮೋದಿ ಜೊತೆಗೆ ಮಾತುಕತೆ
ಈ ನಡುವೆ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಜೊತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಧರಾಲಿ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ವಿಪತ್ತು ಮತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಮಾಹಿತಿ ಪಡೆದಿದ್ದಾರೆ. ರಾಜ್ಯ ಸರ್ಕಾರವು ಸಂಪೂರ್ಣ ಸಿದ್ಧತೆಯೊಂದಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದೆ, ನಿರಂತರ ಭಾರೀ ಮಳೆಯಿಂದಾಗಿ, ಕೆಲವು ಪ್ರದೇಶಗಳಲ್ಲಿ ತೊಂದರೆಗಳಿವೆ ಎಲ್ಲಾ ಸಂಬಂಧಪಟ್ಟ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ ಇದರಿಂದ ಸಂತ್ರಸ್ತರಿಗೆ ತ್ವರಿತ ಸಹಾಯ ಸಿಗುತ್ತದೆ ಎಂದು ಮೋದಿ ಅವರಿಗೆ ಧಾಮಿ ಮಾಹಿತಿ ನೀಡಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ಸಹಾಯವನ್ನು ಭರವಸೆ ನೀಡಿದ್ದಾರೆ.
ಉತ್ತರಾಖಂಡ ಬಿಜೆಪಿ ಸಂಸದರಿಂದ ಮೋದಿ ಭೇಟಿ
ಈ ಎಲ್ಲ ಬೆಳವಣಿಗೆಗಳ ನಡುವೆ ಉತ್ತರಾಖಂಡದ ಬಿಜೆಪಿ ಸಂಸದರನ್ನು (Uttarakhand BJP MPs) ಭೇಟಿಯಾದ ಪ್ರಧಾನಿ ಮೋದಿ, ಉತ್ತರಕಾಶಿ ಉಂಟಾದ ಮೇಘಸ್ಫೋಟ ಘಟನೆ ಕುರಿತು ಚರ್ಚಿಸಿದ್ದಾರೆ. ಉತ್ತರಾಖಂಡದ ಸಂಸದರಾದ ಅಜಯ್ ಭಟ್, ಮಾಲಾ ರಾಜ್ಯ ಲಕ್ಷ್ಮಿ ಶಾ, ತ್ರಿವೇಂದ್ರ ಸಿಂಗ್ ರಾವತ್ ಮತ್ತು ಅನಿಲ್ ಬಲುನಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಉತ್ತರಕಾಶಿಯಲ್ಲಿ ಮೇಘಸ್ಫೋಟ – ಆರ್ಮಿ ಕ್ಯಾಂಪ್‌ನಲ್ಲಿದ್ದ 10ಕ್ಕೂ ಅಧಿಕ ಸೈನಿಕರು ನಾಪತ್ತೆ
100ಕ್ಕೂ ಅಧಿಕ ಮಂದಿ ಮಿಸ್ಸಿಂಗ್
ಇನ್ನೂ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮ ನೈಸರ್ಗಿಕ ವಿಕೋಪಕ್ಕೆ ಸಿಲುಕಿದ್ದು, ಭಾರೀ ಮೇಘಸ್ಫೋಟದಿಂದ ವಿನಾಶವೇ ಸೃಷ್ಟಿಯಾಗಿದೆ. ಧರಾಲಿ ಗ್ರಾಮದ ಬಳಿಯಿರುವ ಖೀರ್ ಗಡ್ ಪ್ರದೇಶದಲ್ಲಿ ಪ್ರವಾಹದಿಂದಾಗಿ ಹಠಾತ್ ನೀರಿನ ಹರಿವು ಹೆಚ್ಚಾದ ಪರಿಣಾಮ ದಿಢೀರ್ ಪ್ರವಾಹ ಉಂಟಾಗಿದೆ. ನೋಡನೋಡುತ್ತಿದ್ದಂತೆ ನದಿಯಲ್ಲಿ ರೌದ್ರಾವತಾರ ತಾಳಿ ಹರಿದು ಬಂದ ಭಾರೀ ಪ್ರಮಾಣದ ಕಪ್ಪು ಬಣ್ಣದ ನೀರಿನಿಂದ 25ಕ್ಕೂ ಹೆಚ್ಚು ಹೋಟೆಲ್, ಹೋಂಸ್ಟೇಗಳು ಕೊಚ್ಚಿಹೋಗಿವೆ. ಘಟನೆಯಲ್ಲಿ ಸುಮಾರು ಹತ್ತು ಮಂದಿ ಮೃತಪಟ್ಟಿದ್ದು, ನೂರಕ್ಕೂ ಅಧಿಕ ಜನರು ಕಾಣೆಯಾಗಿದ್ದಾರೆ. ಇದನ್ನೂ ಓದಿ: ಉತ್ತಾರಾಖಂಡದಲ್ಲಿ ಪ್ರವಾಹ – ಕಲಬುರಗಿ ಜಿಲ್ಲಾಡಳಿತದಿಂದ ಸಹಾಯವಾಣಿ ಕೇಂದ್ರ ಆರಂಭ
ಈ ಪ್ರದೇಶಗಳಲ್ಲಿ ನಾಪತ್ತೆಯಾದವರ ರಕ್ಷಣಾ ಕಾರ್ಯ ಆರಂಭವಾಗಿದೆ. ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಐಟಿಬಿಪಿ ಮತ್ತು ಸ್ಥಳೀಯ ಆಡಳಿತದ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಇದುವರೆಗೆ 150 ಜನರನ್ನ ರಕ್ಷಿಸಲಾಗಿದೆ. ಸುಮಾರು 150 ಜನರನ್ನ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ.