59ನೇ ವಸಂತಕ್ಕೆ ಕಾಲಿಟ್ಟ ಸೆಂಚುರಿ ಸ್ಟಾರ್ ಶಿವಣ್ಣ

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಡಾ. ಶಿವರಾಜ್ ಕುಮಾರ್‌ರವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 59ನೇ ವಸಂತಕ್ಕೆ ಕಾಲಿಟ್ಟಿರುವ ಶಿವರಾಜ್ ಕುಮಾರ್‍ರವರು ಈ ವರ್ಷ ಕೊರೊನಾದಿಂದ ತಮ್ಮ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದಾರೆ.

ವಯಸ್ಸು 59 ಆದರೂ ತಮ್ಮ ನಟನೆ, ಡ್ಯಾನ್ಸ್ ಹಾಗೂ ಸದಾ ಸಖತ್ ಆಕ್ಟೀವ್ ಆಗಿರುವ ಶಿವರಾಜ್ ಕುಮಾರ್ ರವರ ಎನರ್ಜಿ ಈಗೀನ ಯುವಕರನ್ನು ನಾಚಿಸುವಂತಿದೆ ಎಂದರೆ ತಪ್ಪಾಗಲಾರದು. ಸದ್ಯ ಈ ವಿಶೇಷ ದಿನದಂದು ಶಿವರಾಜ್ ಕುಮಾರ್‍ರವರಿಗೆ ಗಣ್ಯಾತಿ ಗಣ್ಯರು ಸೋಶಿಯಲ್ ಮೀಡಿಯಾದ ಮೂಲಕ ವಿಶ್ ಮಾಡುತ್ತಿದ್ದಾರೆ. ಅಲ್ಲದೇ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ವಿಜಯ್ ಮಿಲ್ಟನ್ ನಿರ್ದೇಶನ ಮಾಡಲಿರುವ 123ನೇ ಸಿನಿಮಾದ ಹೆಸರು ಘೋಷಣೆ ಆಗಲಿದೆ. ಜೊತೆಗೆ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಶಿವರಾಜ್ ಕುಮಾರ್ ಕಾಂಬೀನೇಷನ್‍ನಲ್ಲಿ ಮೂಡಿ ಬರುತ್ತಿರುವ ಸಿನಿಮಾದ ಟೈಟಲ್ ಕೂಡ ಲಾಂಚ್ ಆಗಲಿದೆ.

ಸದ್ಯ ನೃತ್ಯ ನಿರ್ದೇಶಕ ಭಜರಂಗಿ-2 ಸಿನಿಮಾದಲ್ಲಿ ಶಿವರಾಜ್ ಕುಮಾರ್‌ರವರು ಬ್ಯೂಸಿಯಾಗಿದ್ದು, ನಂತರ ಹಲವಾರು ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳು ಶಿವಣ್ಣ ಕೈನಲ್ಲಿದೆ. ಇಲ್ಲಿಯವರೆಗೂ 120ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶಿವರಾಜ್ ಕುಮಾರ್‌ರವರು ಅಭಿನಯಿಸಿದ್ದಾರೆ.

ಇತ್ತೀಚೆಗಷ್ಟೇ ಶಿವರಾಜ್ ಕುಮಾರ್ ರವರು ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ನನಗೆ ಮುಖ್ಯ. ದೇವರ ದಯೆಯಿಂದ ಕೊರೊನಾ ಕಡಿಮೆಯಾಗಿದೆ. ಹಾಗಂತ ನಾವು ಎಚ್ಚರಿಕೆಯಿಂದ ಇರಬೇಕಾದ ಸಮಯ ಇನ್ನೂ ಮುಗಿದಿಲ್ಲ. ಮುಂದೆ ಇನ್ನೂ ಎಚ್ಚರಿಕೆಯಿಂದ ಇರಬೇಕಾಗಿದೆ. ನಿಮಗೆಲ್ಲರಿಗೂ ಗೊತ್ತಿರುವಂತೆ ಜುಲೈ 12 ರಂದು ನನ್ನ ಹುಟ್ಟಿದ ದಿನ. ಕಾರಣಾಂತರಗಳಿಂದ ನಾನು ಬೆಂಗಳೂರಿನಲ್ಲಿ ಇರಲ್ಲ. ದಯವಿಟ್ಟು ಯಾರೂ ಬೇಜಾರು ಮಾಡಿಕೊಳ್ಳಬೇಡಿ. ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆ ಮಾಡಲ್ಲ. ಹೀಗಾಗಿ ಯಾರೂ ಕೂಡ ಮನೆ ಬಳಿ ಬರಬೇಡಿ ಎಂದು ಮನವಿ ಮಾಡಿದ್ದರು. ಇದನ್ನೂ ಓದಿ:ಜು.12 ರಂದು ಯಾರೂ ಮನೆಯ ಬಳಿ ಬರಬೇಡಿ: ಶಿವಣ್ಣ ಮನವಿ

Share This Article
Leave a Comment

Leave a Reply

Your email address will not be published. Required fields are marked *