5,70,000ಕ್ಕೂ ಹೆಚ್ಚು ಕಾರುಗಳನ್ನ ಹಿಂಪಡೆದ ಹುಂಡೈ, ಕಿಯಾ

Public TV
1 Min Read

ವಾಷಿಂಗ್ಟನ್‌: ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹುಂಡೈ ಮೋಟರ್ಸ್‌ (Hyundais Motors) ಮತ್ತು ಕಿಯಾ ಕಾರ್ಪೋರೇಷನ್‌ (Kia Corporation) ಕಂಪನಿಗಳು 5.70 ಲಕ್ಷಕ್ಕೂ ಹೆಚ್ಚು ಕಾರುಗಳನ್ನ ಹಿಂಪಡೆದಿವೆ. ಆದರೆ ಇದು ಭಾರತದಲ್ಲಿ ಅಲ್ಲ ಅಮೆರಿಕದಲ್ಲಿ.

ವಾಹನಗಳಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಕಾರುಗಳನ್ನ ಆಫ್‌ ಮಾಡಿದ ಸಂದರ್ಭದಲ್ಲೂ ಈ ಸಮಸ್ಯೆ ಎದುರಾಗುತ್ತಿರುವುದರಿಂದ ವಾಹನ ಹೊಂದಿರುವ ಗ್ರಾಹಕರು ಮನೆಯಿಂದ ಸ್ವಲ್ಪ ದೂರದಲ್ಲಿ ಅಥವಾ ಹೊರಗಡೆ ಪಾರ್ಕಿಂಗ್‌ ಮಾಡುವಂತೆ ಯುಎಸ್ ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ಆಡಳಿತ (NHTSA) ತಿಳಿಸಿದೆ.

ಅಲ್ಲದೇ ಹುಂಡೈ ಕಾರುಗಳನ್ನು ಹೊಂದಿರುವ ಗ್ರಾಹಕರು ಉಚಿತವಾಗಿ ರಿಪೇರಿ ಮಾಡಿಸಿಕೊಳ್ಳಲು ಬಯಸುವವರು ಕೂಡಲೇ ಸ್ಥಳೀಯ ಹುಂಡೈ ಹಾಗೂ ಕಿಯಾ ಡೀಲರ್‌ಶಿಪ್‌ಗಳನ್ನ ಸಂಪರ್ಕಿಸುವಂತೆ ಕಂಪನಿಗಳು ಸಲಹೆ ನೀಡಿವೆ. ಇದನ್ನೂ ಓದಿ: ವಾಣಿಜ್ಯ ವಾಹನಗಳ ಖರೀದಿದಾರರಿಗೆ Tata Motors ಶಾಕ್‌ – ಏಪ್ರಿಲ್‌ 1ರಿಂದ ಬೆಲೆ ಏರಿಕೆ

ಇದೇ ಸಮಸ್ಯೆಯಿಂದ 2022ರ ಆಗಸ್ಟ್‌ ತಿಂಗಳಲ್ಲಿ 2.45 ಲಕ್ಷ ಕಾರುಗಳನ್ನು ಹುಂಡೈ ಹಿಂಪಡೆದಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಬೋಲ್ಟ್ ಬಿಗಿಯಿಲ್ಲವೆಂದು 3,470 ಕಾರುಗಳನ್ನು ಹಿಂದಕ್ಕೆ ಪಡೆದ ಟೆಸ್ಲಾ

ಇತ್ತೀಚೆಗಷ್ಟೇ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯ ಬೈಕ್‌ನಲ್ಲಿ ಬ್ರೇಕ್‌ ಸಮಸ್ಯೆಯಿಂದಾಗಿ 5 ಸಾವಿರ ಬೈಕ್‌ಗಳನ್ನು ಕಂಪನಿ ಹಿಂದಕ್ಕೆ ಪಡೆದಿತ್ತು. ಇದಕ್ಕೂ ಮುನ್ನ ಸೀಟ್‌ಬ್ಯಾಕ್ ಫ್ರೇಮ್‌ಗಳನ್ನು ಭದ್ರಪಡಿಸುವ ಬೋಲ್ಟ್‌ಗಳು ಸುರಕ್ಷಿತವಾಗಿ ಮತ್ತು ಬಿಗಿಯಾಗಿ ಇಲ್ಲವೆಂದು ಕಾರಣ ನೀಡಿ ಟೆಸ್ಲಾ ಕಂಪನಿ 3,470 ಕಾರುಗಳನ್ನ ಹಿಂದಕ್ಕೆ ಪಡೆದಿತ್ತು.

Share This Article
Leave a Comment

Leave a Reply

Your email address will not be published. Required fields are marked *