ದಾವಣಗೆರೆ: ಆರು ವರ್ಷದ ಮಗುವಿನ ಮೇಲೆ 55 ವರ್ಷದ ವ್ಯಕ್ತಿಯೋರ್ವ ಅತ್ಯಾಚಾರ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಸುಬಾನ್ ಸಾಬ್(55) ಅತ್ಯಾಚಾರವೆಸಗಿದ ಕಾಮುಕ. ನಗರದ ಎಸ್.ಪಿ.ಎಸ್ ನಗರದಲ್ಲಿ ಈ ಘಟನೆ ನಡೆದಿದ್ದು, ಕಳೆದ ಗುರುವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಎಸ್.ಕೆ ಅವಲಕ್ಕಿ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದ ಸುಬಾನ್ ಸಾಬ್ ಮಗುವನ್ನು ಮನೆಗೆ ಕರೆದು ಅತ್ಯಾಚಾರವೆಸಗಿದ್ದಾನೆ.
ಶನಿವಾರ ರಾತ್ರಿ ಮತ್ತೆ ಅತ್ಯಾಚಾರವೆಸಗಲು ಹೋದಾಗ ಮಗು ಪೋಷಕರಿಗೆ ತಿಳಿಸಿದ್ದು, ಈ ವೇಳೆ ಪೋಷಕರು ಕಾಮುಕ ಸುಬಾನ್ ಸಾಬ್ ಮೇಲೆ ಅಜಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಸದ್ಯ ಅಪ್ರಾಪ್ತೆಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಕಾಮುಕ ಸುಬಾನ್ ಸಾಬ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರವೆಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎನ್ನುವ ಕಾಯ್ದೆಗೆ ಸಮ್ಮತಿ ಸಿಕ್ಕ ಬೆನ್ನಲ್ಲೇ ಇಂತಹದ್ದೊಂದು ಹೀನಾಯ ಕೃತ್ಯ ನಡೆದಿರುವುದು ಸಮಾಜ ತಲೆ ತಗ್ಗಿಸುವ ವಿಷಯವಾಗಿದೆ.