ಕೊರೊನಾ ಭೀತಿಗೆ ಇರಾನ್‍ನಿಂದ 53 ಭಾರತೀಯರು ವಾಪಾಸ್ – ದೇಶದಲ್ಲಿ ಸೋಂಕಿತರ ಸಂಖ್ಯೆ 110ಕ್ಕೆ ಏರಿಕೆ

Public TV
2 Min Read

ನವದೆಹಲಿ: ವಿಶ್ವದಾದ್ಯಂತ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಭೀತಿಗೆ ಇರಾನ್‍ನಲ್ಲಿದ್ದ 53 ಮಂದಿ ಭಾರತೀಯರು ಇಂದು ದೇಶಕ್ಕೆ ವಾಪಸ್ಸಾಗಿದ್ದಾರೆ. ಮುಂಜಾನೆ ರಾಜಸ್ಥಾನದ ಜೈಸಲ್ಮೇರ್ ವಿಮಾನ ನಿಲ್ದಾಣಕ್ಕೆ ಬಂದಿರುವ ಭಾರತೀಯರನ್ನು ಪ್ರಾಥಮಿಕ ಸ್ಕ್ರೀನಿಂಗ್ ತಪಾಸಣೆಗಾಗಿ ಸೇನಾ ಸ್ವಾಸ್ಥ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.

ಸದ್ಯ ದೇಶಕ್ಕೆ ಮರಳಿರುವ ಭಾರತೀಯರು ಇರಾನ್‍ನ ಟೆಹ್ರಾನ್ ಹಾಗೂ ಶಿರಾಜ್ ನಗರಗಳಲ್ಲಿ ನೆಲೆಸಿದ್ದವರಾಗಿದ್ದು, ಎಲ್ಲರನ್ನು ಸೋಂಕಿನ ಪ್ರಾಥಮಿಕ ತಪಾಸಣೆಗೆ ವಿಮಾನ ನಿಲ್ದಾಣದಿಂದ ಜೈಸಲ್ಮೇರ್‍ನಲ್ಲಿರುವ ಸೇನಾ ಸ್ವಾಸ್ಥ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಇರಾನ್‍ನಿಂದ ಬಂದವರ ಬ್ಯಾಗ್‍ ಗಳಿಗೆ ವೈರಸ್ ತಗುಲಿದ್ದರೆ ಅವುಗಳು ನಾಶವಾಗಲಿ ಎಂದು ಮುಂಜಾಗ್ರತಾ ಕ್ರಮವಾಗಿ ಔಷಧಿಯನ್ನು ಸಿಂಪಡಿಸಲಾಯಿತು.

ವಿಶ್ವದಾದ್ಯಂತ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್‍ಗೆ 127 ರಾಷ್ಟ್ರ ಹಾಗೂ ಪ್ರಾಂತ್ಯಗಳು ತುತ್ತಾಗಿವೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಈಗ ವಿಶ್ವದೆಲ್ಲೆಡೆ ಹರುಡುತ್ತಿದ್ದು, ಈವರೆಗೆ 6,516 ಮಂದಿಯನ್ನು ಬಲಿಪಡೆದಿದೆ. ಹೀಗೆ ಎಲ್ಲೆಡೆ ತನ್ನ ಕರಿನೆರಳು ಬೀರುತ್ತಿರುವ ಕೊರೆನಾ ಜನರಲ್ಲಿ ಭಯ ಹುಟ್ಟಿಸಿದೆ.

ಒಟ್ಟು 127 ರಾಷ್ಟ್ರ ಹಾಗೂ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಈವರೆಗೆ ಸುಮಾರು 1,69,577 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಅಲ್ಲದೇ ಚೀನಾದಲ್ಲಿ 3,213 ಮಂದಿ ಸೇರಿದಂತೆ ವಿಶ್ವದೆಲ್ಲೆಡೆ ಒಟ್ಟು 6,516 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸುಮಾರು 77,764 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ 79,376 ಮಂದಿ ಸೋಂಕಿನಿಂದ ಬಳಲುತ್ತಿದ್ದು, ಅವರಲ್ಲಿ 5,921 ಮಂದಿ ಸ್ಥಿತಿ ಚಿಂತಾಜನಕವಾಗಿದೆ.

ಚೀನಾದಲ್ಲಿ ಈವರೆಗೆ ಕೊರೊನಾ ಸೋಂಕಿಗೆ 80,860 ಮಂದಿ ತುತ್ತಾಗಿದ್ದಾರೆ. ಅವರಲ್ಲಿ 67,752 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 3,213 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 9,895 ಮಂದಿ ಕೊರೊನಾದಿಂದ ಬಳಲುತ್ತಿದ್ದು, 3,226 ರೋಗಿಗಳ ಸ್ಥಿತಿ ಗಂಭಿರವಾಗಿದೆ.

ಇರಾನ್ 13,938 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅವರಲ್ಲಿ 4,590 ಮಂದಿ ಸೊಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 8,624 ರೋಗಿಗಳು ಸೋಂಕಿನಿಂದ ಬಳಲುತ್ತಿದ್ದು, 724 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಇತ್ತ ಕೊರೊನಾ ಪೀಡಿತ ದೇಶಗಳಲ್ಲಿ ಇರುವ ಭಾರತೀಯರನ್ನು ರಾಷ್ಟ್ರಕ್ಕೆ ವಾಪಸ್ ಕರೆತರುವ ಕಾರ್ಯ ಕೂಡ ಭರದಿಂದ ನಡೆಯುತ್ತಿದ್ದು, ಹೀಗೆ ಭಾರತಕ್ಕೆ ಬಂದವರ ಮೇಲೆ ನಿಗಾವಹಿಸಿ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆಯನ್ನು ಕೂಡ ಘೋಷಿಸಲಾಗಿದೆ. ಭಾರತದಲ್ಲಿ ಈವರೆಗೆ 110ಕ್ಕೆ ಮಂದಿ ತುತ್ತಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾತರೆ.

ರಾಜ್ಯಾವಾರು ಕೊರೊನಾ ಸೋಂಕಿತರ ಸಂಖ್ಯೆ ಹೀಗಿದೆ:
ಆಂಧ್ರ ಪ್ರದೇಶ – 01
ದೆಹಲಿ – 07
ಹರಿಯಾಣ – 14
ಕರ್ನಾಟಕ- 07
ಕೇರಳ- 22
ಮಹಾರಾಷ್ಟ್ರ – 33
ಪಂಜಾಬ್ – 01

ರಾಜಾಸ್ಥಾನ – 04
ತಮಿಳುನಾಡು – 01
ತೆಲಂಗಾಣ- 03
ಜಮ್ಮು-ಕಾಶ್ಮೀರಾ – 02
ಲಡಕ್ – 03
ಉತ್ತರ ಪ್ರದೇಶ – 13
ಉತ್ತರಕಾಂಡ- 01

Share This Article
Leave a Comment

Leave a Reply

Your email address will not be published. Required fields are marked *