ಇಂದು 11 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 523ಕ್ಕೆ ಏರಿಕೆ

Public TV
2 Min Read

-ಇವತ್ತು 14 ಮಂದಿ ಡಿಸ್ಚಾರ್ಜ್

ಬೆಂಗಳೂರು: ರಾಜ್ಯದಲ್ಲಿ ಇಂದು 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 523 ಕ್ಕೆ ಏರಿಕೆಯಾಗಿದೆ.

ಕಲಬುರಗಿ 6, ಗದಗ 1, ಬೆಂಗಳೂರು (ಪಾದರಾಯನಪುರ)1 ಮತ್ತು ಬಾಗಲಕೋಟೆಯ ಮೂವರಿಗೆ ಇಂದು ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಇನ್ನು ಹೊಂಗಸಂದ್ರದ 145 ಮತ್ತು ಪಾದರಾಯನಪುರದ 70 ಜನರ ವರದಿ ನೆಗೆಟಿವ್ ಬಂದಿದೆ.

ಸೋಂಕಿತರ ವಿವರ:
1.ರೋಗಿ-513: ಬೆಂಗಳೂರಿನ 48 ವರ್ಷ ಪುರುಷ. ಬಿಬಿಎಂಪಿ ವಾರ್ಡ್-135ರ ಕಂಟೈನ್ಮೆಂಟ್ ಝೋನ್ ಸಂಪರ್ಕ ಹೊಂದಿದ್ದರು.
2.ರೋಗಿ-514: ಗದಗಿನ 75 ವರ್ಷದ ಪುರುಷ. ತೀವ್ರ ಉಸಿರಾಟದ ತೊಂದರೆ ಸೋಂಕು.
3.ರೋಗಿ-515: ಕಲಬುರಗಿಯ 55 ವರ್ಷದ ಪುರುಷ. ರೋಗಿ-425ರ ಸಂಪರ್ಕದಲ್ಲಿದ್ದರು.
4.ರೋಗಿ-516: ಕಲಬುರಗಿಯ 40 ವರ್ಷದ ಮಹಿಳೆ. ರೋಗಿ-425ರ ಸಂಪರ್ಕದಲ್ಲಿದ್ದರು.
5.ರೋಗಿ-517: ಕಲಬುರಗಿಯ 43 ವರ್ಷದ ಪುರುಷ. ರೋಗಿ-425ರ ಸಂಪರ್ಕ ಹೊಂದಿದ್ದರು.
6.ರೋಗಿ-518: ಕಲಬುರಗಿಯ 28 ವರ್ಷದ ಮಹಿಳೆ. ರೋಗಿ-425ರ ಸಂಪರ್ಕದಲ್ಲಿದ್ದರು.
7.ರೋಗಿ-519: ಕಲಬುರಗಿಯ 45 ವರ್ಷದ ಮಹಿಳೆ. ರೋಗಿ-425ರ ಸಂಪರ್ಕದಲ್ಲಿದ್ದರು.
8.ರೋಗಿ-520: ಕಲಬುರಗಿಯ 22 ವರ್ಷದ ಮಹಿಳೆ. ರೋಗಿ-425ರ ಸಂಪರ್ಕ ಹೊಂದಿದ್ದರು.
9.ರೋಗಿ-521: ಬಾಗಲಕೋಟೆಯ 20 ವರ್ಷದ ಯುವತಿ ರೋಗಿ-381ರ ಸಂಪರ್ಕ ಹೊಂದಿದ್ದರು.
10.ರೋಗಿ-522: ಬಾಗಲಕೋಟೆಯ 11 ವರ್ಷದ ಬಾಲಕ, ರೋಗಿ ನಂಬರ್ 456ರ ಜೊತೆ ದ್ವಿತೀಯ ಸಂಪರ್ಕದಲ್ಲಿದ್ದನು.
11.ರೋಗಿ-523: ಬಾಗಲಕೋಟೆಯ 22 ವರ್ಷದ ಯುವಕ, ರೋಗಿ ನಂಬರ್ 381ರ ಜೊತೆ ಸಂಪರ್ಕದಲ್ಲಿದ್ದನು.

ರಾಜ್ಯದಲ್ಲಿ ಈವರೆಗೂ 523 ಮಂದಿಗೆ ಕೊರೊನಾ ವೈರಸ್ ತಗುಲಿದೆ. ಈ ಪೈಕಿ 20 ಮಂದಿ ಮೃತಪಟ್ಟಿದ್ದು, 207 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಲಬುರಗಿಯಲ್ಲಿ ರೋಗಿ-425 (26 ವರ್ಷದ ಮಹಿಳೆ)ಯಿಂದ 6 ಮಂದಿಗೆ ಸೋಂಕು ತಗುಲಿರುವುದು ಇಂದು ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಮತ್ತೆ ಆತಂಕ ಶುರುವಾಗಿದೆ. ಸಂಜೆ ಬಿಡುಗಡೆಯಾದ ಬುಲೆಟಿನ್ ನಲ್ಲಿ ಬಾಗಲಕೋಟೆಯ ಮೂವರಿಗೆ ಕೊರೊನಾ ಸೋಂಕು ತಗುಲಿರೋದು ಪತ್ತೆಯಾಗಿದೆ.

ಕಲಬುರಗಿಯ ಕಮರ್ ಕಾಲೋನಿ ನಿವಾಸಿ ರೋಗಿ-425 ಮಹಿಳೆಯ ನಾಲ್ಕು ತಿಂಗಳ ಹೆಣ್ಣು ಮಗುವಿಗೆ ಈ ಮೊದಲು ಸೋಂಕು ದೃಢಪಟ್ಟಿತ್ತು. ಇದರಿಂದಾಗಿ ಮಗುವಿನಿಂದ ತಾಯಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಆಕೆಗೂ ಕೊರೊನಾ ಪಾಸಿಟಿವ್ ಬಂದಿತ್ತು. ಸದ್ಯ ಮಹಿಳೆಯಿಂದ ಕಲಬುರಗಿಯ ಆರು ಜನರಿಗೆ ಸೋಂಕು ಹರಡಿದೆ.

Share This Article
Leave a Comment

Leave a Reply

Your email address will not be published. Required fields are marked *