‘ಡೇರ್ ಡೆವಿಲ್ ಮುಸ್ತಾಫಾ’ಗೆ 50ರ ಸಂಭ್ರಮ: ಬಿರಿಯಾನಿ-ಪುಳಿಯೋಗರೆ ಪಾರ್ಟಿ

Public TV
2 Min Read

ಇಂದು ಕನ್ನಡ ಚಿತ್ರಗಳ ಪಾಲಿಗೆ ಸಂಭ್ರಮವೆಂದರೆ ಬರೀ ವಾರ, ತಿಂಗಳ ಸುತ್ತ ಬಂಧಿಯಾಗುವ ಕಾಲಮಾನ. ಇಂಥ ಹೊತ್ತಿನಲ್ಲಿ ಸಿನಿಮಾವೊಂದು ಯಶಸ್ವಿಯಾಗಿ 50 ದಿನ (50th Celebration) ಪೂರೈಸಿದರೆ ಬರೀ ಚಿತ್ರತಂಡ ಮಾತ್ರವಲ್ಲ ಒಂದಿಡಿ ಚಿತ್ರರಂಗವೇ ಖುಷಿಪಡುವ ಸಂಗತಿ. ಅಂತಹ ಯಶಸ್ಸಿಗೆ ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಡೇರ್ ಡೆವಿಲ್ ಮುಸ್ತಾಫಾ (Dare Devil Mustafa) ಸಿನಿಮಾ ಸಾಕ್ಷಿಯಾಗಿದೆ.

ಭರ್ಜರಿಯಾಗಿ ಐವತ್ತು ದಿನ ಪೂರೈಸಿ ಅಮೆಜಾನ್ ಪ್ರೈಮ್ ಒಟಿಟಿಯಲ್ಲಿಯೂ ಭರಪೂರ ಮೆಚ್ಚುಗೆ ಪಡೆಯುತ್ತಿರುವ ಖುಷಿ ಕ್ಷಣಗಳನ್ನು ಚಿತ್ರತಂಡ ಸೆಲೆಬ್ರೆಟ್ ಮಾಡಿದೆ. ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆದ ಐವತ್ತು ದಿನದ ಸಂಭ್ರಮಾಚರಣೆಯಲ್ಲಿ ಇಡೀ ತಂಡಕ್ಕೆ ಗೆಲುವಿನ ಪಾರಿತೋಷಕ ನೀಡಿ ಗೌರವಿಸಲಾಯಿತು. ಜೊತೆಗೆ ಬಿರಿಯಾನಿ ಪುಳಿಯೊಗರೆ ಪಾರ್ಟಿ ಮಾಡಿ ಇಡೀ ಡೇರ್ ಡೆವಿಲ್ ಮುಸ್ತಾಫ್ ಬಳಗ ಖುಷಿಪಟ್ಟಿತು.  ಇದನ್ನೂ ಓದಿ:ಮತ್ತೆ ತಂದೆ ಖುಷಿಯಲ್ಲಿ ‘ಅಗ್ನಿಸಾಕ್ಷಿ’ ವಿಜಯ್‌ ಸೂರ್ಯ

ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಪ್ರೆಸೆಂಟ್ ಮಾಡಿರುವ ಧನಂಜಯ್ (Dolly Dhananjay) ಮಾತನಾಡಿ, ನಾನು ಡೇರ್ ಡೆವಿಲ್ ಮುಸ್ತಾಫಾ ಸಿನಿಮಾದ ಭಾಗವಾಗಿರುವುದು ನನಗೆ ಖುಷಿ. ಶಶಾಂಕ್ ಕಾಲೇಜ್ ನಲ್ಲಿ ನನಗೆ ಜ್ಯೂನಿಯರ್. ಅಲ್ಲಿಂದನೂ ನೋಡ್ತಾ ಇದ್ದೆ. ತುಂಬಾ ಜನ ನಿರ್ದೇಶಕರು ಆಗಬೇಕು ಅಂತಾ ಬರುತ್ತಾರೆ. ನಾನು ಕಥೆ ಮಾಡಿದ್ದೇನೆ ಇನ್ವೆಸ್ಟ್ ಮಾಡಿ ಅಂತಾರೇ. ನಾನು ಅವರಿಗೆ ಶಶಾಂಕ್ ಎಕ್ಸಾಂಪಲ್ ಕೊಟ್ಟು ಕಳಿಸುತ್ತೇನೆ.‌‌ ಕೆಲಸ ಮಾಡುತ್ತಾ ಮಾಡುತ್ತಾ ಕಲಿಯುವುದು. ಸೀದಾ ಬಂದು ಕಥೆ ಮಾಡಿದ್ದೇನೆ ಕೋಟ್ಯಾಂತರ ರೂಪಾಯಿ ದುಡ್ಡು ಹಾಕಿ ಎಂದರೆ ಕಷ್ಟವಾಗುತ್ತದೆ. ಡೇರ್ ಡೆವಿಲ್ ಮುಸ್ತಾಫಾ ಮಾಸ್ ಸಿನಿಮಾ ಅಂತಾನೇ ಕರೆಯುತ್ತೇನೆ. ಥಿಯೇಟರ್ ನಲ್ಲಿ‌ ಕುಳಿತು ನೋಡಿ ಸೆಲಬ್ರೆಟ್ ಮಾಡುವ ಸಿನಿಮಾ. ಹಳೆ ಬೇರು ಹೊಸ ಚಿಗರು ಕೂಡಿರಲು ಮರ ಸೊಬಗು ಎನ್ನುವಂತೆ ಹಿರಿಯರು ಹಾಗೂ ಕಿರಿಯರು ಎಲ್ಲರೂ ಇಟ್ಟುಕೊಂಡು ಸಿನಿಮಾವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ ಎಂದರು.

ಒಳ್ಳೆಯ ಸಿನಿಮಾಗಳು ಬಂದಾಗ ಜನರು ಖಂಡಿತವಾಗಿಯೂ ಬೆಂಬಲ ನೀಡುತ್ತಾರೆ ಎಂಬ ನಂಬಿಕೆ ಗಾಂಧಿನಗರದಲ್ಲಿದೆ. ಅದು ‘ಡೇರ್ಡೆವಿಲ್ ಮುಸ್ತಾಫಾ’ ವಿಚಾರದಲ್ಲಿ ನಿಜವಾಗಿದೆ. ಇದು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಾಣ ಮಾಡಿರುವ ಸಿನಿಮಾ. ಅನಂತ ಶಾಂತಯ್ಯ ಜೊತೆಗೂಡಿ ಚಿತ್ರಕಥೆ ಬರೆದಿರುವ ಶಶಾಂಕ್ ಸೋಗಾಲ್ (Shashank Sogal)  ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

 

ರಾಹುಲ್‌ ರಾಯ್‌ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್‌ ಶ್ಯಾಮ್‌ ಸಂಗೀತವಿದೆ. ಶಿಶಿರ್‌ ಬೈಕಾಡಿ, ಆದಿತ್ಯ ಅಶ್ರೀ, ಅಭಯ್‌, ಸುಪ್ರೀತ್‌ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್‌ನಲ್ಲಿ ಡೇರ್ ಡೆವಿಲ್ ಮುಸ್ತಾಫಾ ನಿರ್ಮಾಣವಾಗಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್