ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದ ಫೋಟೋಗೆ 500 ರೂ. ಬಹುಮಾನ: ನಿತಿನ್ ಗಡ್ಕರಿ

Public TV
1 Min Read

ನವದೆಹಲಿ: ಸಿಕ್ಕ ಸಿಕ್ಕ ಜಾಗಗಳಲ್ಲಿ ಜನರು ವಾಹನಗಳನ್ನು ಪಾರ್ಕಿಂಗ್ ಮಾಡುವ ಅಭ್ಯಾಸವನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂದು ಕಾಣುತ್ತದೆ. ಆದರೂ ಜನರ ಈ ಉಲ್ಲಂಘನೆಯನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಹೊಸ ಯೋಜನೆಯನ್ನು ರೂಪಿಸಿದೆ.

ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಿದ ಫೋಟೋಗಳನ್ನು ತೆಗೆದು, ಅದನ್ನು ಶೇರ್ ಮಾಡಿದ್ದಲ್ಲಿ, ಅವರಿಗೆ 500 ರೂ. ಬಹುಮಾನ ಕೊಡುವ ಹೊಸ ಕಾನೂನನ್ನು ತರುವ ಬಗ್ಗೆ ಯೋಜಿಸಿರುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಇದನ್ನೂ ಓದಿ: ಬರೀ ಸೋನಿಯಾ ಗಾಂಧಿ ಮಾತ್ರವಲ್ಲ ವಿಜಯೇಂದ್ರ, ಯಡಿಯೂರಪ್ಪ ಸಹ ಜೈಲಿಗೆ ಹೋಗ್ತಾರೆ: ಯತ್ನಾಳ್

ಇಂಡಸ್ಟ್ರಿಯಲ್ ಡಿಕಾರ್ಬೋನೈಸೇಶನ್ ಸಮ್ಮಿಟ್ 2022 ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿದ ವ್ಯಕ್ತಿಗೆ 1,000 ರೂ. ದಂಡ ವಿಧಿಸುವುದರೊಂದಿಗೆ, ಆ ವಾಹನದ ಫೋಟೋವನ್ನು ಕ್ಲಿಕ್ಕಿಸಿದವರಿಗೆ 500 ರೂ. ಬಹುಮಾನ ಕೊಡುವುದಾಗಿ ಹೊಸ ಕಾನೂನನ್ನು ಶೀಘ್ರವೇ ತರುವ ಬಗ್ಗೆ ತಿಳಿಸಿದ್ದಾರೆ.

ಭಾರತದ ನಗರಗಳಲ್ಲಿ ಕಾರುಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಪಾರ್ಕಿಂಗ್ ಸಮಸ್ಯೆಯೂ ಉಂಟಾಗುತ್ತಿದೆ. ಕೆಲವು ಕುಟುಂಬಗಳಲ್ಲಿ ಪ್ರತಿಯೊಬ್ಬರೂ ಕಾರುಗಳನ್ನು ಹೊಂದಿರುವವರೂ ಇದ್ದಾರೆ. ಆದರೆ ಯಾರೂ ಪಾರ್ಕಿಂಗ್‌ಗೆ ಜಾಗವನ್ನೇ ನಿರ್ಮಿಸುತ್ತಿಲ್ಲ. ಉದಾಹರಣೆ ಕೊಡುವುದಾದರೆ ದೆಹಲಿಯಲ್ಲಿ ಇರುವ ವಿಶಾಲವಾದ ರಸ್ತೆಗಳನ್ನೇ ಜನರು ಪಾರ್ಕಿಂಗ್ ಜಾಗವಾಗಿ ಪರಿಗಣಿಸುತ್ತಿದ್ದಾರೆ ಎಂದು ಗಡ್ಕರಿ ತಿಳಿಸಿದರು. ಇದನ್ನೂ ಓದಿ: ಮೊದಲ ದಿನ ಸಿಇಟಿ ಪರೀಕ್ಷೆ ಸುಗಮ: ಅಶ್ವಥ್ ನಾರಾಯಣ

ಅಮೆರಿಕದಲ್ಲಿ ನೈರ್ಮಲ್ಯ ಕಾರ್ಮಿಕರು ಕೂಡಾ ಕಾರುಗಳನ್ನು ಹೊಂದಿದ್ದಾರೆ. ಶೀಘ್ರದಲ್ಲೇ ಭಾರತದಲ್ಲೂ ಆ ಪರಿಸ್ಥಿತಿ ಎದುರಾಗುವಂತೆ ತೋರುತ್ತಿದೆ. ಕೋವಿಡ್ ಹಾವಳಿ ಕಡಿಮೆಯಾಗುತ್ತಿದ್ದಂತೆ ಕಾರುಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲರೂ ಕಾರುಗಳನ್ನು ಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

Live Tv

Share This Article
Leave a Comment

Leave a Reply

Your email address will not be published. Required fields are marked *