ಅಂಬುಲೆನ್ಸ್‌ನಲ್ಲೇ 14ನೇ ಮಗುವಿಗೆ ಜನ್ಮ- 50ರ ಬಾಣಂತಿ ತಾಯಿ ಜೊತೆ ಇದ್ದ 22ರ ಮಗ

By
1 Min Read

ಲಕ್ನೋ: ಉತ್ತರ ಪ್ರದೇಶದ (Utttar Pradesh) ಹಾಪುರ್ ಜಿಲ್ಲೆಯಲ್ಲಿ (Hapur District) 50 ವರ್ಷದ ಮಹಿಳೆಯೊಬ್ಬರು ಅಂಬುಲೆನ್ಸ್‌ನಲ್ಲಿ (Ambulance) 14ನೇ ಮಗುವಿಗೆ ಜನ್ಮ ನೀಡಿದ್ದಾರೆ.

ಅಂಬ್ಯುಲೆನ್ಸ್‌ನಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿ ಹೆರಿಗೆ ಮಾಡಿದ್ದು ತಾಯಿ (Mother) ಮತ್ತು ಮಗು (Baby) ಇಬ್ಬರೂ ಆರೋಗ್ಯವಾಗಿದ್ದಾರೆ ಮತ್ತು ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದರು. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದ ಬಳಿಕ ಕೊಹ್ಲಿ ಟ್ರೋಲ್‌ ಮಾಡಿದವರಿಗೆ ಚಳಿ ಬಿಡಿಸಿದ ನಟಿ

ಪಿಲ್ಖುವಾದ ಮೊಹಲ್ಲಾ ಬಜರಂಗಪುರಿಯ ನಿವಾಸಿ ಇಮಾಮುದ್ದೀನ್ ಅವರ ಪತ್ನಿ 50 ವರ್ಷದ ಗುಡಿಯಾ ಬೇಗಂ ಅವರಿಗೆ ಹೆರಿಗೆ ನೋವು ಇತ್ತು. ಅವರನ್ನು ಪಿಲ್ಖುವಾ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಈ ವೇಳೆ ವೈದ್ಯರು ಮೀರತ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಆರೋಗ್ಯ ಇಲಾಖೆಯ 108 ಆಂಬ್ಯುಲೆನ್ಸ್ ಮಹಿಳೆಯನ್ನು ಕರೆದೊಯ್ಯಲಾಯಿತು. ಇದನ್ನೂ ಓದಿ: ಭೂಕಂಪದಿಂದಾಗಿ ಆಸ್ಪತ್ರೆ ನಾಮಾವಶೇಷ – ಬ್ಯಾಂಕಾಕ್‌ನ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ದಾರಿಯಲ್ಲಿ ಗುಡಿಯಾಗೆ ಹೆರಿಗೆ ನೋವು ಹೆಚ್ಚಾಯಿತು. ಪರಿಸ್ಥಿತಿ ಹದಗೆಟ್ಟಾಗ ಅಂಬುಲೆನ್ಸ್‌ ನಿಲ್ಲಿಸಿ ಸಿಬ್ಬಂದಿ ಲಭ್ಯವಿರುವ ಹೆರಿಗೆ ಕಿಟ್ ಸಹಾಯದಿಂದ ಮಹಿಳೆಗೆ ಹೆರಿಗೆ ಮಾಡುವಲ್ಲಿ ಯಶಸ್ವಿಯಾದರು. ಹೆರಿಗೆಯ ನಂತರ, ತಾಯಿ ಮತ್ತು ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಸಮಯದಲ್ಲಿ ಮಹಿಳೆಯ 22 ವರ್ಷದ ಮಗ ಕೂಡ ಆಸ್ಪತ್ರೆಗೆ ಬಂದಿದ್ದ.

 

Share This Article