ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳನ್ನು ಇತ್ಯರ್ಥಕ್ಕೆ 50% ರಿಯಾಯಿತಿಯಡಿ ದಂಡ ಪಾವತಿಸಲು ಸಾರಿಗೆ ಇಲಾಖೆ ನೀಡಿದ್ದ ಅವಕಾಶಕ್ಕೆ ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಇದುವರೆಗೆ ಬರೊಬ್ಬರಿ 106 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. 37,86,173 ಬಾಕಿ ಸಂಚಾರ ನಿಯಮ ಉಲ್ಲಂಘನೆ ಕೇಸ್‌ಗಳು ಇತ್ಯರ್ಥಗೊಂಡಿವೆ. ಇದನ್ನೂ ಓದಿ: ಟ್ರಾಫಿಕ್ ಫೈನ್ ಪಾವತಿಗೆ 50% ಡಿಸ್ಕೌಂಟ್ – 15 ದಿನಕ್ಕೆ 45 ಕೋಟಿ ದಾಟಿದ ದಂಡ ಪಾವತಿಯ ಮೊತ್ತ
ಆ.23 ರಿಂದ ಸೆ.12 ರ ವರೆಗೆ ಬಾಕಿ ದಂಡ ಕಟ್ಟಲು 50% ಆಫರ್ ನೀಡಲಾಗಿತ್ತು. ಆನ್‌ಲೈನ್ ಹಾಗೂ ಅಫ್ಲೈನ್‌ನಲ್ಲಿ ವಾಹನ ಸವಾರರು ಬಾಕಿ ದಂಡ ಪಾವತಿ ಮಾಡಿದ್ದಾರೆ. ಒಟ್ಟು 21 ದಿನಗಳಲ್ಲಿ 106 ಕೋಟಿ ರೂ. ದಂಡ ಸಂಗ್ರಹವಾಗಿದೆ.
ಸೆಪ್ಟೆಂಬರ್ 12 ರ ಕೊನೆಯ ಒಂದೇ ದಿನದಲ್ಲಿ 25 ಕೋಟಿ ದಂಡ ಸಂಗ್ರಹಣೆಯಾಗಿದೆ. 50% ರಿಯಾಯಿತಿಯಲ್ಲಿ ದಂಡ ಪಾವತಿಸಲು ನೀಡಿದ್ದ ಕಾಲಾವಕಾಶ ಶುಕ್ರವಾರಕ್ಕೆ ಮುಗಿದಿದೆ.