ಕೈ ಜಿಲ್ಲಾಧ್ಯಕ್ಷನ ಮೇಲೆ 50 ಲಕ್ಷ ವಂಚನೆ ಆರೋಪ- ನ್ಯಾಯ ಸಿಗದಿದ್ರೆ ಆತ್ಮಹತ್ಯೆಯ ಎಚ್ಚರಿಕೆ

By
1 Min Read

ರಾಮನಗರ: ಕಾಂಗ್ರೆಸ್ (Congress) ಜಿಲ್ಲಾಧ್ಯಕ್ಷನ ವಿರುದ್ಧ ಹಣ ವಂಚನೆ ಆರೋಪ ಕೇಳಿಬಂದಿದ್ದು, ಚನ್ನಪ್ಟಣದ ವಿದ್ಯುತ್ ಗುತ್ತಿಗೆದಾರ ಸುರೇಶ್ ಬಾಬು ಎಂಬವರಿಗೆ 50 ಲಕ್ಷ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್ ವಿರುದ್ಧ ಎಲೆಕ್ಟ್ರಿಕಲ್ ಗುತ್ತಿಗೆದಾರ (Contractor) ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ. 2017ರಲ್ಲಿ ನಿರಂತರ ಜ್ಯೋತಿ ವಿದ್ಯುತ್ ಕಾಮಗಾರಿಯನ್ನ ಎಲೆಕ್ಟ್ರಿಕಲ್ ಗುತ್ತಿಗೆದಾರರೂ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರೂ ಆಗಿರುವ ಗಂಗಾಧರ್, ಸುರೇಶ್ ಬಾಬು ಎಂಬವರಿಗೆ ಉಪಗುತ್ತಿಗೆ ನೀಡಿದ್ರು. ಬಳಿಕ 2020ರಲ್ಲಿ ಕಾಮಗಾರಿ ಮುಗಿಸಿರುವ ಸುರೇಶ್ ಬಾಬು, ಬಿಲ್ ನೀಡುವಂತೆ ಮನವಿ ಮಾಡಿದ್ರು.

ಆದರೆ ಕಾಮಗಾರಿ ಮುಗಿದು ಮೂರು ವರ್ಷ ಕಳೆದಿದ್ರೂ ಗಂಗಾಧರ್ ಹಣ (Money Cheating) ನೀಡದೇ ವಂಚನೆ ಮಾಡಿದ್ದಾರೆ. 50 ಲಕ್ಷ ಹಣ ಕೊಡದೇ ಬೆಂಬಲಿಗರಿಂದ ಬೆದರಿಕೆ ಹಾಕಿಸಿದ್ದಾರೆ. ಹಾಗಾಗಿ ನ್ಯಾಯ ದೊರಕಿಸಿ ಕೊಡುವಂತೆ ಗುತ್ತಿಗೆದಾರ ಸುರೇಶ್ ಬಾಬು ಅಳಲು ತೋಡಿಕೊಂಡಿದ್ದು, ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮನೆಗೆ ಬರಲು ನಿರಾಕರಿಸಿದ ಪತ್ನಿ – ಮನನೊಂದು ಪತಿ ಆತ್ಮಹತ್ಯೆ

Share This Article