ಇಥಿಯೋಪಿಯಾದಲ್ಲಿ ಭೂಕುಸಿತ: 50 ಮಂದಿ ಸಾವು, 125 ಮಂದಿ ನಾಪತ್ತೆ

1 Min Read

ಅಡಿಸ್ ಅಬಾಬಾ: ಇಥಿಯೋಪಿಯಾ ದಕ್ಷಿಣದ ಮೂರು ಜಿಲ್ಲೆಗಳಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಂಭವಿಸಿದ ಭೂಕುಸಿತಗಳಲ್ಲಿ 50 ಜನರು ಸಾವನ್ನಪ್ಪಿದ್ದು, 125 ಜನರು ಕಾಣೆಯಾಗಿದ್ದಾರೆ.

ಗ್ಯಾಮೊ ವಲಯದಲ್ಲಿ ಭೂಕುಸಿತಕ್ಕೆ ಗಚೊ ಬಾಬಾ, ಕಂಬ ಮತ್ತು ಬೊಂಕೆ ಜಿಲ್ಲೆಗಳು ತತ್ತರಿಸಿವೆ. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಮಣ್ಣಿನಡಿ ಸಿಲುಕಿದ್ದ ಒಬ್ಬನನ್ನು ರಕ್ಷಿಸಲಾಗಿದೆ ಎಂದು ಗ್ಯಾಮೊ ವಲಯದ ನಿರ್ದೇಶಕ ಮೆಸ್ಫಿನ್ ಮನುಕಾ ತಿಳಿಸಿದ್ದಾರೆ.

ಎಪಿ ಗಚೊ ಬಾಬಾ ಜಿಲ್ಲಾ ಸಂವಹನ ಮುಖ್ಯಸ್ಥ ಅಬೆಬೆ ಅಗೇನಾ ಅವರೊಂದಿಗೆ ಮಾತನಾಡಿದ್ದು, ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಮಣ್ಣು ಕುಸಿತದಿಂದ ಉಂಟಾದ ಮಣ್ಣಿನಲ್ಲಿ ಹೂತುಹೋಗಿದ್ದಾರೆ ಎಂದು ಅವರು ಹೇಳಿದ್ದಾರೆ. ಭೂಕುಸಿತದಿಂದ ಎಷ್ಟು ಮನೆಗಳು ಹಾನಿಗೊಳಗಾಗಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ” ಎಂದು ಅಗೇನಾ ತಿಳಿಸಿದ್ದಾರೆ.

ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ ದಕ್ಷಿಣ ಇಥಿಯೋಪಿಯಾ ಪ್ರಾದೇಶಿಕ ರಾಜ್ಯದ ಅಧ್ಯಕ್ಷ ತಿಲಹುನ್ ಕೆಬೆಡೆ, ಮಳೆ ಮುಂದುವರಿದಿದೆ. ಹೆಚ್ಚಿನ ಭೂಕುಸಿತ ಸಂಭವಿಸುವ ಭೀತಿ ಇರುವುದರಿಂದ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ.

Share This Article