ಶಿವಮೊಗ್ಗ: ಗೋಮಾಂಸ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ 50 ಕೆಜಿ ಗೋಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದು, 29 ಹಸುಗಳನ್ನು ರಕ್ಷಣೆ ಮಾಡಲಾಗಿದೆ.
ಭದ್ರಾವತಿಯ ಅನ್ವರ್ ಕಾಲೋನಿಯಲ್ಲಿನ ಎರಡು ಗೋಮಾಂಸ ಅಂಗಡಿಗಳ ಮೇಲೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಅಂಗಡಿಯಲ್ಲಿ ಸುಮಾರು 50 ಕೆಜಿ ಮಾಂಸವನ್ನು ಮಾರಾಟಕ್ಕೆ ಸಿದ್ಧತೆ ನಡೆಸಿದ್ದರು. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ಬುಕ್ ಮಾಡಿದ್ದು ಅನಿಯನ್ ರಿಂಗ್ಸ್ ಬಂದಿದ್ದು ಹಸಿ ಈರುಳ್ಳಿ
ಅಲ್ಲದೇ 29 ಹಸುಗಳನ್ನು ಹತ್ಯೆಗೈಯಲು ಸಹ ಒಂದೆಡೆ ಕಟ್ಟಿ ಹಾಕಿದ್ದರು. ಪೊಲೀಸರು ದಾಳಿ ನಡೆಸುತ್ತಿದ್ದಂತೆ ಆರೋಪಿಗಳು ಪರಾರಿಯಾದರು. ನಂತರ ಪೊಲೀಸರು ಮಾಂಸವನ್ನು ವಶಕ್ಕೆ ಪಡೆದು, 29 ಹಸುಗಳನ್ನು ರಕ್ಷಣೆ ಮಾಡಿ ಠಾಣೆಗೆ ಕೊಂಡೊಯ್ದರು.
ಘಟನೆ ಕುರಿತು ಹಳೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.