ಅಪಾರ್ಟ್‌ಮೆಂಟ್ ಆವರಣದಲ್ಲಿ ಸೈಕಲ್ ಆಟವಾಡುತ್ತಿದ್ದಾಗ ಕಾರು ಡಿಕ್ಕಿ – ಬಾಲಕ ದುರ್ಮರಣ

1 Min Read

ಮುಂಬೈ: ಪುಣೆಯ ಅಪಾರ್ಟ್‌ಮೆಂಟ್ (Pune Apartment) ಆವರಣದಲ್ಲಿ ಸೈಕಲ್ ಸವಾರಿ ಮಾಡುತ್ತಿದ್ದ ಐದು ವರ್ಷದ ಬಾಲಕನ (Boy) ಮೇಲೆ ಕಾರು ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಲೋನಿ ಕಲ್ಭೋರ್ (Loni Kalbhor) ಪ್ರದೇಶದಲ್ಲಿ ನಡೆದಿದೆ.

ನಿಷ್ಕರ್ಷ್ ಅಶ್ವತ್ ಸ್ವಾಮಿ (5) ಮೃತ ಬಾಲಕ. ಬಾಲಕ ತನ್ನ ಕುಟುಂಬದೊಂದಿಗೆ ಜಾಯ್ ನೆಸ್ಟ್ ಸೊಸೈಟಿಯಲ್ಲಿ ವಾಸಿಸುತ್ತಿದ್ದ. ಸೋಮವಾರ ಮಧ್ಯಾಹ್ನ 3:30ರ ಸುಮಾರಿಗೆ ನಿಷ್ಕರ್ಷ್ ತನ್ನ ಅಜ್ಜಿಯೊಂದಿಗೆ ಅಪಾರ್ಟ್‌ಮೆಂಟ್ ಆವರಣದಲ್ಲಿ ಆಟವಾಡುತ್ತಿದ್ದ. ಈ ವೇಳೆ ವೇಗವಾಗಿ ಬಂದ ಕಾರೊಂದು ಬಾಲಕನಿಗೆ ಡಿಕ್ಕಿ ಹೊಡೆದು ಆತನ ಮೇಲೆ ಹರಿದಿದೆ. ಘಟನೆಯ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: 1 ಕೋಟಿ ವೆಚ್ಚದ ಸಿಸಿ ರಸ್ತೆಗೆ ಚಾಲನೆ ನೀಡಿದ ಶೈಲೇಂದ್ರ ಬೆಲ್ದಾಳೆ

ಅಪಘಾತವಾದ ಕೂಡಲೇ ಕಾರು ಚಾಲಕ ತಕ್ಷಣ ಕಾರಿನಿಂದ ಇಳಿದು ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಅಷ್ಟು ಹೊತ್ತಿಗಾಗಲೇ ಬಾಲಕ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು. ಇದನ್ನೂ ಓದಿ: ಬಿಜೆಪಿಗೆ ಅಧಿಕಾರ ನೀಡಿದರೆ ಶಬರಿಮಲೆ ಚಿನ್ನ ಕಳವು ತನಿಖೆ – ಇದು ಮೋದಿ ಗ್ಯಾರಂಟಿ : ಕೇರಳದಲ್ಲಿ ಪ್ರಧಾನಿ ವಚನ

ಘಟನೆ ಸಂಬಂಧ ಮಗುವಿನ ತಂದೆ ಅಶ್ವತ್ ನಾರಾಯಣ್ ಸ್ವಾಮಿ ನೀಡಿದ ದೂರಿನ ಆಧಾರದ ಮೇಲೆ ಲೋನಿ ಕಲ್ಭೋರ್ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕುಣಿಗಲ್ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಕಚೇರಿ ಜಪ್ತಿ

Share This Article