5ರ ಬಾಲೆಯ ಮೇಲೆ ರೇಪ್‌ – ಬೆಳಗಾವಿಯಲ್ಲಿ ಬಾಗಲಕೋಟೆ ಮೂಲದ ವ್ಯಕ್ತಿ ಅರೆಸ್ಟ್‌

Public TV
2 Min Read

ಬೆಳಗಾವಿ: ಎರಡು ವರ್ಷದ ಹಿಂದೆ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ (Rape Case) ಸಂಬಂಧಿಸಿದಂತೆ ವ್ಯಕ್ತಿಯನ್ನು ಬಂಧಿಸಲಾಗಿದೆ.

ಜಿಲ್ಲಾ‌‌ ಮಕ್ಕಳ ರಕ್ಷಣಾ ಘಟಕ ನೀಡಿದ ದೂರಿನ ಅನ್ವಯ ಮಂಗಳವಾರ ರಾತ್ರಿ ಆರೋಪಿ ತುಫೇಲ್ ಅಹ್ಮದ್ ದಾದಾಫೀರ್‌ನನ್ನು ಬಂಧಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ (Bheemashankar Guled) ತಿಳಿಸಿದ್ದಾರೆ.

ಎಸ್‌ಪಿ ಹೇಳಿದ್ದೇನು?
ಮಂಗಳವಾರ ಸಂಜೆ ಪುನೀತ್ ಕೆರೆಹಳ್ಳಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ಅದರಲ್ಲಿ ಓರ್ವ ವ್ಯಕ್ತಿ ಮಾತಾಡಿದ ಆಡಿಯೋ ಮತ್ತು ವಿಡಿಯೋ ತುಣುಕು ಇತ್ತು. ಇದರಲ್ಲಿ ಬಾಲಕಿ ಮೇಲೆ ಓರ್ವ ವ್ಯಕ್ತಿ ಮಲಗುವ ರೀತಿಯಲ್ಲಿತ್ತು. ಇದನ್ನೂ ಓದಿ: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಕೊಪ್ಪಳ ಮೂಲದ ಓರ್ವ ವಶಕ್ಕೆ

 

ಈ ವಿಡಿಯೋ ಪ್ರಕಟವಾದ ನಂತರ ನಮ್ಮ ಸೈಬರ್‌ ಕ್ರೈಂ ಪೊಲೀಸರಿಗೆ (Cyber Crime Police) ಮಾಹಿತಿ ನೀಡಲಾಗಿತ್ತು. ವಿಡಿಯೋದಲ್ಲಿನ ವಿಳಾಸ ಆಧರಿಸಿ ನಮ್ಮ ಪೊಲೀಸರು ತನಿಖೆ ಶುರು ಮಾಡಿದ್ದರು. ಕೂಡಲೇ ನಮ್ಮ ಮುರಗೋಡ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು.  ಇದನ್ನೂ ಓದಿ: ಅಪಹರಣಕ್ಕೆ ಸೂಚನೆ ನೀಡಿಲ್ಲ, ಯಾವುದೇ ಪುರಾವೆ ಇಲ್ಲ ಜಾಮೀನು ರದ್ದು ಮಾಡ್ಬೇಡಿ: ದರ್ಶನ್‌ ವಾದ ಏನು?

ಈ ಘಟನೆ 2023 ಅಕ್ಟೋಬರ್ 5 ರಂದು ನಡೆದಿದ್ದು ಮಸೀದಿ ಪಕ್ಕದ ಮನೆಯ ವ್ಯಕ್ತಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆರೋಪಿ ಘಟನೆ ನಡೆದ ಹಿಂದಿನ ದಿನ ಬಾಗಲಕೋಟೆಯ ಮಹಾಲಿಂಗಪುರದಿಂದ ಬಂದಿದ್ದ. ಚಿಕ್ಕಮ್ಮನ ಮನೆಗೆ ಬಂದಾಗ ಹೀನಾಯ ಕೃತ್ಯ ಎಸಗಿದ್ದ.

 


ಈ ವಿಚಾರ ಗೊತ್ತಾದಾಗ ಅಲ್ಲಿರುವ ಸ್ಥಳೀಯರು ಬಾಲಕಿ ತಂದೆ ಕರೆದು ಮಾತಾಡಿದ್ದರು. ಆ ದಿನ ದೂರು ಕೊಡುವುದು ಬೇಡಾ ಅಂತಾ ತೀರ್ಮಾನಿಸಿ ಬಿಟ್ಟಿದ್ದರು. ಇದಾದ ಬಳಿಕ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಾಲಕಿ ಪೋಷಕರ ಜೊತೆಗೆ ಮಾತಾಡಲಾಗಿತ್ತು.

ತಂದೆ ತಾಯಿ ದೂರು ನೀಡಲು ಒಪ್ಪದ ಕಾರಣ ಜಿಲ್ಲಾ‌‌ ಮಕ್ಕಳ ರಕ್ಷಣಾ ಘಟಕದಿಂದ ದೂರು ಪಡೆದು ರಾತ್ರಿಯೇ ಆರೋಪಿ ತುಫೇಲ್ ಅಹ್ಮದ್ ದಾದಾಫೀರ್ ಬಂಧಿಸಿದ್ದೇವೆ. ಆರೋಪಿ ಮೌಲ್ವಿ ಅಲ್ಲ. ಆತ ವೆಲ್ಡಿಂಗ್‌ ಕೆಲಸ ಮಾಡಿಕೊಂಡಿದ್ದ. ಕೆಲಸ ಇಲ್ಲದೇ ಇದ್ದಾಗ ಮಸೀದಿಗಳಿಗೆ ಹೋಗಿ ಭಾಷಣ ಮಾಡುತ್ತಿದ್ದ ಎಂದು ತಿಳಿಸಿದರು.

Share This Article