ಮೈಸೂರಿನಲ್ಲಿ ಯುವತಿಯನ್ನು ಮುಂದೆಬಿಟ್ಟು ಹನಿಟ್ರ್ಯಾಪ್ ನಡೆಸುತ್ತಿದ್ದ ಐವರ ಬಂಧನ

Public TV
1 Min Read

ಮೈಸೂರು: ಸಾಂಸ್ಕೃತಿಕ ನಗರ ಎಂದೇ ಪ್ರಸಿದ್ಧವಾದ ಮೈಸೂರಿನಲ್ಲಿ ಹನಿಟ್ರ್ಯಾಪ್ ಪ್ರಕರಣವೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದ್ದು, ಈ ಸಂಬಂಧ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಸ್ತೆಯಲ್ಲಿ ಯುವತಿಯನ್ನ ಮುಂದೆಬಿಟ್ಟು ದರೋಡೆ ಮಾಡುತ್ತಿದ್ದ ಮಧುಸೂದನ್, ಚೇತನ್, ಹೇಮಂತ್, ಗಿರೀಶ್, ವಿನೋದ್ ಎಂಬವರ ಬಂಧನವಾಗಿದೆ.

8 ಮಂದಿ ತಂಡ ಕಟ್ಟಿಕೊಂಡು ಮೈಸೂರು ನಂಜನಗೂಡು ರಸ್ತೆಯಲ್ಲಿ ಶ್ರೀಮಂತ ವ್ಯಕ್ತಿಗಳ ಕಾರಿಗೆ ಕೈತೊರಿ ನಿಲ್ಲಿಸಿ ದರೊಡೆಗೆ ಸಂಚು ಹಾಕುತ್ತಿದ್ದರು. ಈ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸರು ಬರುತ್ತಿರುವುದನ್ನು ಕಂಡ ಇಬ್ಬರು ಯುವಕರು ಹಾಗೂ ಯುವತಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಬಂಧಿತರು ಶ್ರೀಮಂತರನ್ನೆ ಟಾರ್ಗೆಟ್ ಮಾಡುತ್ತಿದ್ದರು ಎಂಬುವುದಾಗಿ ತಿಳೀದುಬಂದಿದೆ. ಮಾಲಾ ಎಂಬ ಯುವತಿಯನ್ನ ಶ್ರೀಮಂತರೊಂದಿಗೆ ಕಳುಹಿಸಿ ನಂತರ ಆ ವ್ಯಕ್ತಿಗಳ ಮೇಲೆ ತಂಡ ದಾಳಿ ಮಾಡುತ್ತಿತ್ತು. ಸದ್ಯ ಬಂಧಿತರಿಂದ 2 ಕಾರು, ಖಾರದಪುಡಿ, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *