ಆಪರೇಷನ್‌ ಸಿಂಧೂರದಲ್ಲಿ ಭಾರತ ಪರಾಕ್ರಮ – ಪಾಕ್‌ನ 6 ಯುದ್ಧ ವಿಮಾನಗಳು ಉಡೀಸ್‌; ವಾಯುಪಡೆ ಮುಖ್ಯಸ್ಥ

Public TV
0 Min Read

– ಭಾರತದ ಕಾರ್ಯಾಚರಣೆಗೆ ಪಾಕ್‌ ಫೈಟರ್‌ ಜೆಟ್‌ಗಳು ನಾಮಾವಶೇಷ

ನವದೆಹಲಿ: ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ಸಂದರ್ಭದಲ್ಲಿ ಭಾರತದ ಪರಾಕ್ರಮದ ಬಗ್ಗೆ ವಾಯುಪಡೆ ಮುಖ್ಯಸ್ಥ ಎ.ಪಿ.ಸಿಂಗ್ (A.P.Singh) ಮಾತನಾಡಿದ್ದಾರೆ. ಪಾಕಿಸ್ತಾನದ 6 ಯುದ್ಧ ವಿಮಾನಗಳನ್ನು ನಾಮಾವಶೇಷ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಪಾಕಿಸ್ತಾನದ ಐದು ಯುದ್ಧ ವಿಮಾನಗಳು ಮತ್ತು ವಾಯುಗಾಮಿ ಕಣ್ಗಾವಲುಗಾಗಿ ವಿನ್ಯಾಸಗೊಳಿಸಲಾದ ಮತ್ತೊಂದು ವಿಮಾನವನ್ನು ನಾಶಪಡಿಸಿದವು ಎಂದು ಎಪಿ ಸಿಂಗ್ ದೃಢಪಡಿಸಿದ್ದಾರೆ. ಇದನ್ನೂ ಓದಿ: ಸೇವಿಂಗ್ಸ್ ಅಕೌಂಟ್ ಗ್ರಾಹಕರಿಗೆ ICICI ಬ್ಯಾಂಕ್ ಶಾಕ್ – ಮಿನಿಮಮ್ ಬ್ಯಾಲೆನ್ಸ್ ಮೊತ್ತದಲ್ಲಿ ಭಾರೀ ಏರಿಕೆ

ಬೆಂಗಳೂರಿನಲ್ಲಿ ಏರ್ ಚೀಫ್ ಮಾರ್ಷಲ್ ಎಲ್‌ಎಂ ಕತ್ರೆ ಉಪನ್ಯಾಸದಲ್ಲಿ ಮಾತನಾಡಿದ ಅವರು, ಮೇ 10 ರಂದು ಭಾರತ ಪಾಕಿಸ್ತಾನದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಜಾಕೋಬಾಬಾದ್ ವಾಯುನೆಲೆಯಲ್ಲಿ ನಿಲ್ಲಿಸಲಾಗಿದ್ದ ಕೆಲವು ಅಮೇರಿಕಾ ನಿರ್ಮಿತ ಎಫ್ -16 ಜೆಟ್‌ಗಳು ನಾಶಪಡಿಸಿವೆ ಎಂದು ಹೇಳಿದ್ದಾರೆ.

ಮೂರು ದಿನಗಳ ಯುದ್ಧದ ನಂತರ, ಭಾರತ ಹಲವು ವಾಯುನೆಲೆಗಳ ಮೇಲೆ ದಾಳಿ ನಡೆಸಿದ್ದರಿಂದ, ಅಂತಿಮವಾಗಿ ಪಾಕಿಸ್ತಾನವು ಭಾರತದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಕರೆ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಅಖಾಲ್ | ಭದ್ರತಾ ಸಿಬ್ಬಂದಿ, ಉಗ್ರರ ನಡುವೆ ಗುಂಡಿನ ಚಕಮಕಿ – ಇಬ್ಬರು ಯೋಧರು ಹುತಾತ್ಮ

ಎಪಿ ಸಿಂಗ್ ಹೇಳಿದ ಪ್ರಮುಖ ಅಂಶಗಳು ಏನು?
* ಆಪರೇಷನ್ ಸಿಂಧೂರದಲ್ಲಿ ಭಾರತ ಪಾಕಿಸ್ತಾನದ ಕನಿಷ್ಠ ಐದು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ.
* ವಾಯುಗಾಮಿ ಕಣ್ಗಾವಲುಗಾಗಿ ವಿನ್ಯಾಸಗೊಳಿಸಲಾದ ಮತ್ತೊಂದು ವಿಮಾನ ನಾಶ ಮಾಡಿದೆ. ಇದನ್ನು ಸುಮಾರು 300 ಕಿಲೋಮೀಟರ್ ದೂರದಿಂದ ನಾಶಪಡಿಸಿದೆ. ಇದು ಗಾಳಿಯ ಮೇಲ್ಮೈಯಿಂದ ಮಾಡಿದ ಅತಿದೊಡ್ಡ ದಾಳಿಯಾಗಿದೆ.
* ಶಾಹ್‌ಬಾಜ್ ಜಕಾಬಾಬಾದ್ ಏರ್‌ಫೀಲ್ಡ್‌ ಮೇಲೆ ದಾಳಿ ನಡೆಸಿ ಈ-16 ಹ್ಯಾಂಗರ್‌ನ ಅರ್ಧ ಭಾಗವನ್ನು ನಾಶಪಡಿಸಲಾಗಿದೆ. ಅದರಲ್ಲಿ ಕೆಲವು ವಿಮಾನಗಳು ಇದ್ದವು ಎಂದು ಭಾವಿಸಲಾಗಿದೆ.
* ಇದಲ್ಲದೆ, ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳಾದ ಮುರಿದ್ ಮತ್ತು ಚಕ್ಲಾಲಾದಲ್ಲಿ ಕನಿಷ್ಠ ಆರು ರೇಡಾರ್‌ಗಳು (ಕೆಲವು ದೊಡ್ಡವು, ಕೆಲವು ಸಣ್ಣವು) ನಾಶಪಡಿಸಿದೆ.
* S-400 ಸಿಸ್ಟಮ್ ಆಪರೇಷನ್ ನಲ್ಲಿ ಗೇಮ್-ಚೇಂಜರ್ ಆಗಿತ್ತು, ಅವರು ನಮ್ಮ ವ್ಯವಸ್ಥೆ ಭೇಧಿಸಲು ಸಾಧ್ಯವಾಗಲಿಲ್ಲ.
* ನಾವು ಮಾಡಿದ ನಿರ್ದಿಷ್ಟ ದಾಳಿಗೆ ಸ್ಯಾಟಲೈಟ್ ದೃಶ್ಯಗಳ ಜೊತೆಗೆ ಸ್ಥಳೀಯ ಮಾಧ್ಯಮಗಳ ವರದಿಗಳಿದೆ

Share This Article