ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ತಾಯಿ ಮತ್ತು ಮಗುವಿನ ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ನಡೆದಿದೆ.
ಬಿಹಾರ ಮೂಲದ 26 ವರ್ಷದ ತಾಯಿ ನಿಶಾದೇವಿ ಹಾಗೂ ಐದು ತಿಂಗಳ ಗಂಡು ಮಗು ರಿಷಿ ಕೊಲೆಯಾದ ದುರ್ದೈವಿಗಳು. ಚಿತ್ತಾಪುರದ ಓರಿಯಂಟಲ್ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪಾರಿತೋಷ್ ಜೇಸ್ವಾಲ್ ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಆದರೆ ಸಂಜೆ ಮನೆಗೆ ಬೀಗ ಹಾಕಿದ್ದನ್ನು ಕಂಡ ಅಕ್ಕಪಕ್ಕದವರು, ಪಾರಿತೋಷ್ ಜೇಸ್ವಾಲ್ ಗೆ ಫೋನ್ ಮಾಡಿ ನಿಮ್ಮ ಮನೆಗೆ ಬೀಗ ಹಾಕಲಾಗಿದೆ ಅಂತಾ ಹೇಳಿದ್ದಾರೆ.
ಆತ ಬಂದು ಮನೆ ಬಾಗಿಲು ತೆರೆದಾಗ ತಾಯಿ ಮಗು ಕೊಲೆಯಾಗಿದ್ದು ಗೊತ್ತಾಗಿದೆ. ಮೇಲ್ನೊಟಕ್ಕೆ ಗಂಡನೇ ಕೊಲೆ ಮಾಡಿ ಮನೆಗೆ ಲಾಕ್ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದಾನೆ ಅನ್ನೊ ಅನುಮಾನ ವ್ಯಕ್ತವಾಗಿದೆ. ಚಿತ್ತಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ತಾಪುರ ಠಾಣೆಯಲ್ಲಿ ಈ ಕುರಿತು ಪ್ರಕರಣವನ್ನ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸದ್ಯ ಪತಿ ಪಾರಿತೋಷ್ ಜೇಸ್ವಾಲ್ ನನ್ನ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಆದರೆ ಕೊಲೆಗೆ ನಿಖರ ಕಾರಣ ಏನೆಂಬುದು ತನಿಖೆಯ ನಂತರವಷ್ಟೆ ಗೋತ್ತಾಗಬೇಕಿದೆ.