Kerala| ಸಾರಿಗೆ ಬಸ್‌ಗೆ ಕಾರು ಡಿಕ್ಕಿ – ಐವರು ಮೆಡಿಕಲ್ ವಿದ್ಯಾರ್ಥಿಗಳ ದುರ್ಮರಣ, ಇಬ್ಬರು ಗಂಭೀರ

Public TV
1 Min Read

ತಿರುವನಂತಪುರಂ: ಸಾರಿಗೆ ಬಸ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಐವರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಕೇರಳದ (Kerala) ಅಲಪುಝಾ (Alappuzha) ಜಿಲ್ಲೆಯಲ್ಲಿ ನಡೆದಿದೆ.

ಸಂದೀಪ್ ವಲ್ಸನ್, ಆಯೂಷ್ ಶಾಜಿ, ಮಹಮ್ಮದ್ ಇಬ್ರಾಹಿಂ ಪಿಪಿ, ದೇವನಂದನ್, ಮಹಮ್ಮದ್ ಅಬ್ದುಲ್ ಜಬ್ಬರ್ ಮೃತ ವಿದ್ಯಾರ್ಥಿಗಳು. ಇವರು ಪ್ರಥಮ ವರ್ಷದ ವೈದ್ಯಕೀಯ ಕೋರ್ಸ್ ಓದುತ್ತಿದ್ದರು. ಕರ್ಲಕೋಡ್ ಪ್ರದೇಶದಲ್ಲಿ ಸೋಮವಾರ ತಡರಾತ್ರಿ 10 ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿದೆ. ಭೀಕರ ಅಪಘಾತದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಇದನ್ನೂ ಓದಿ: ಶಿಯಾ-ಸುನ್ನಿಗಳ ನಡುವೆ ಮತ್ತೆ ರಕ್ತಪಾತ – ದಿನ ದಿನಕ್ಕೂ ಏರುತ್ತಿದೆ ಸಾವಿನ ಸಂಖ್ಯೆ!

ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಹಾಗೂ ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ರಾಜ್ಯದ ವಿವಿಧೆಡೆ ಮುಂದಿನ 3 ಗಂಟೆಯ ಒಳಗೆ ಭಾರೀ ಮಳೆಯ ಎಚ್ಚರಿಕೆ

Share This Article