ಕನ್ಯಾಕುಮಾರಿ ಬೀಚ್‍ನಲ್ಲಿ ಐವರು MBBS ವಿದ್ಯಾರ್ಥಿಗಳು ನೀರುಪಾಲು

Public TV
1 Min Read

ಚೆನ್ನೈ: ಮದುವೆಗೆ ತೆರಳಿದ್ದ ಐವರು ವೈದ್ಯಕೀಯ ವಿದ್ಯಾರ್ಥಿಗಳು (MBBS Students) ತಮಿಳುನಾಡಿನ (Tamil Nadu) ಕನ್ಯಾಕುಮಾರಿ (Kanniyakumari) ಬೀಚ್‍ನಲ್ಲಿ ಸಮುದ್ರ ಪಾಲಾಗಿದ್ದಾರೆ.

ಮೃತರನ್ನು ತಂಜಾವೂರಿನ ಚಾರುಕವಿ, ನೇವೇಲಿಯ ಗಾಯತ್ರಿ, ಕನ್ಯಾಕುಮಾರಿಯ ಸರ್ವದರ್ಶಿತ್, ದಿಂಡಿಗಲ್‍ನ ಪ್ರವೀಣ್ ಸ್ಯಾಮ್ ಮತ್ತು ಆಂಧ್ರಪ್ರದೇಶದ ವೆಂಕಟೇಶ್ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳು ಕನ್ಯಾಕುಮಾರಿಗೆ ಮದುವೆಗೆ ಬಂದಿದ್ದರು. ಈ ವೇಳೆ ಸಮುದ್ರದ ಬಳಿ ಬಂದಿದ್ದಾರೆ. ಇದನ್ನೂ ಓದಿ: ಕ್ರಿಕೆಟ್‌ ಆಡುತ್ತಿದ್ದಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕ ದುರ್ಮರಣ!

ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಅದನ್ನು ಮುಚ್ಚಲಾಗಿತ್ತು. ಪಕ್ಕದ ತೆಂಗಿನ ತೋಟದಿಂದ ಬೀಚ್‍ಗೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಮೂವರು ಮಹಿಳೆಯರನ್ನು ರಕ್ಷಿಸಲಾಗಿದ್ದು, ಆಸರಿಪಳ್ಳಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪತಿಯ ಮರ್ಮಾಂಗವನ್ನು ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ ಕೊಟ್ಟ ಪತ್ನಿ!

Share This Article