5 ಲಕ್ಷ ರೂ. ಲಂಚ ಪಡೆದ ಪ್ರಕರಣ- ಬೆಂಗಳೂರು ಡಿಸಿಯಾಗಿದ್ದ ಮಂಜುನಾಥ್ ಅರೆಸ್ಟ್

Public TV
2 Min Read

ಬೆಂಗಳೂರು: ಸಿಲಿಕಾನ್ ಸಿಟಿಯ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ಇದೀಗ ಅರೆಸ್ಟ್ ಆಗಿದ್ದಾರೆ. ಜಮೀನು ವ್ಯಾಜ್ಯ ಇತ್ಯರ್ಥಪಡಿಸಲು 5 ಲಕ್ಷ ಪಡೆದ ಪ್ರಕರಣದಲ್ಲಿ ಸದ್ಯ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಎಂಡಿ ಆಗಿರುವ ಮಂಜುನಾಥ್ ಅರೆಸ್ಟ್ ಆಗಿದ್ದಾರೆ.

ಎಸಿಬಿ ಅಧಿಕಾರಿಗಳು ಮಂಜುನಾಥ್‍ರನ್ನು ಇಂದು ವಿಚಾರಣೆಗೆ ಕರೆದು ಸಾಕ್ಷ್ಯಾಧಾರ ಪಕ್ಕಾ ಆದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಮೂಲತಃ ರಾಜ್ಯ ಲೆಕ್ಕ ಪತ್ರ ಇಲಾಖೆ ಹಿರಿಯ ಅಧಿಕಾರಿಯಾಗಿದ್ದ ಮಂಜುನಾಥ್ ಅವರು ನಾನ್ ಕೆಎಎಸ್ ವಿಭಾಗದಲ್ಲಿ ಐಎಎಸ್ ಪದೋನ್ನತಿ ಪಡೆದವರಾಗಿದ್ದಾರೆ. ಚಿಕ್ಕಬಳ್ಳಾಪುರ ಸಿಇಒ ಆಗಿದ್ದರು ನಂತರ ಕೋಲಾರ ಡಿಸಿ ಆಗಿದ್ದರು. ಬಳಿಕ ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದರು. ಕಳೆದ 1 ವರ್ಷದಿಂದ ಬೆಂಗಳೂರು ಡಿಸಿಯಾಗಿದ್ದರು.

ಭ್ರಷ್ಟಾಚಾರ ಆರೋಪ ಕೇಳಿಬಂದ ಬೆನ್ನಲ್ಲೇ ಬೆಂಗಳೂರು ಡಿಸಿಯಿಂದ ಕಳೆದ ವಾರವಷ್ಟೇ ಇಂಟಿಗ್ರೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಮ್ ಎಂಡಿಯಾಗಿ ಮಂಜುನಾಥ್‍ನನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಇದೀಗ ವಿಚಾರಣೆಗೆ ಕರೆದು ಮಂಜುನಾಥ್ ರನ್ನ ಕರೆದು ಎಸಿಬಿ ಅರೆಸ್ಟ್ ಮಾಡಿದೆ. ಇದನ್ನೂ ಓದಿ: ಮುಂಚೆನೇ ಹೇಳಿದ್ದೆ, ಯಾರು ಎಷ್ಟೇ ದೊಡ್ಡವರಿದ್ರೂ ಕ್ರಮ ತಗೋತೀವಿ ಅಂತ: ಸಿಎಂ

ಏನಿದು ಪ್ರಕರಣ..?: ಆನೇಕಲ್ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನಿಗಾಗಿ ಗಲಾಟೆ ನಡೆದಿತ್ತು. ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದ ಕೇಸ್ ಡಿಸಿ ಕೋರ್ಟಿಗೆ ಬಂದಿತ್ತು. ದೂರುದಾರದ ಪರವಾಗಿ ಆದೇಶ ನೀಡಲು ಬೇಡಿಕೆ ವ್ಯಕ್ತವಾಗಿತ್ತು. ಬೇಗೂರು ನಿವಾಸಿ ಅಜಂ ಪಾಷಾ ಎಂಬವರು ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಜಿಲ್ಲಾಧಿಕಾರಿ ಮಂಜುನಾಥ್ 5 ಲಕ್ಷ ಲಂಚ ಪಡೆದ ಆರೋಪ ಕೇಳಿ ಬಂದಿತ್ತು. ತನ್ನ ಅಧೀನ ಕೆಲಸಗಾರನ ಮೂಲಕ ಡಿಸಿ ಹಣ ಪಡೆದಿದ್ದರು. ಈ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಅಲ್ಲದೆ ಹಣದ ಸಮೇತ ಡಿಸಿ ಅಧೀನ ಕೆಲಸಗಾರನ ಬಂಧಿಸಲಾಗಿತ್ತು.

ಆತ ಡಿಸಿ ಹೇಳಿದ್ದಕ್ಕೆ ಹಣ ಪಡೆದಿದ್ದಾಗಿ ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದಾನೆ. ಅನಂತರ ಡಿಸಿ ವಿರುದ್ಧ ಎಸಿಬಿ ಎಫ್‍ಐಆರ್ ದಾಖಲಿಸಿ ತನಿಖೆ ಕೈಗೊಂಡಿದೆ. ತನ್ನ ವಿರುದ್ಧದ ಎಫ್‍ಐಆರ್ ಹಾಗೂ ಎಸಿಬಿ ತನಿಖೆ ರದ್ದುಪಡಿಸುವಂತೆ ಕೋರಿ ಮಂಜುನಾಥ್ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಪಿಎಸ್‌ಐ ಅಕ್ರಮ -ADGP ಅಮೃತ್‌ ಪೌಲ್ ಅರೆಸ್ಟ್‌

ಮಂಜುನಾಥ್‌ ಸಸ್ಪೆಂಡ್:‌ ಬಂಧಿತ ಐಎಎಸ್ ಅಧಿಕಾರಿ  ಮಂಜುನಾಥ್ ನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಆಲ್ ಇಂಡಿಯ ಸರ್ವಿಸ್ ರೂಲ್ಸ್ ಅಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *