ಹುಮಾಯೂನ್ ಸಮಾಧಿ ಬಳಿಯ ಮಸೀದಿಯ ಮೇಲ್ಛಾವಣಿ ಕುಸಿದು ಐವರು ಸಾವು

Public TV
1 Min Read

ನವದೆಹಲಿ: ದೆಹಲಿಯ ಹುಮಾಯೂನ್ ಸಮಾಧಿ ಬಳಿಯ ಮಸೀದಿಯ ಒಂದು ಭಾಗದ ಮೇಲ್ಛಾವಣಿ ಕುಸಿದು ಐವರು ಮೃತಪಟ್ಟಿದ್ದಾರೆ ಎಂದು ದೆಹಲಿ ಪೊಲೀಸರು (Delhi Police) ತಿಳಿಸಿದ್ದಾರೆ.

ದರ್ಗಾ ಷರೀಫ್ ಪಟ್ಟೆ ಷಾ ನಿಜಾಮುದ್ದೀನ್ ಪೂರ್ವದಲ್ಲಿರುವ ಹುಮಾಯೂನ್ ಸಮಾಧಿಯ (Humayun’s Tomb) ಬಳಿಯ ಮಸೀದಿಯ ಒಂದು ಬದಿಯ ಛಾವಣಿ ಕುಸಿದು ಮೂವರು ಮಹಿಳೆಯರು, ಇಬ್ಬರು ಪುರುಷರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಶರಣಬಸಪ್ಪ ಅಪ್ಪ ಲಿಂಗೈಕ್ಯ – ಶರಣಬಸವೇಶ್ವರ ಸಂಸ್ಥಾನದ ಸಂಪ್ರದಾಯದಂತೆ ನೇರವೇರಿದ ಅಂತ್ಯಸಂಸ್ಕಾರ

ಅವಶೇಷಗಳಡಿ ಸಿಲುಕಿದ 11 ಮಂದಿಯನ್ನು ರಕ್ಷಣಾ ಸಿಬ್ಬಂದಿಗಳು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ಪಡೆ, ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರಿಂದ ಶೋಧ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article