ಲಕ್ನೋದಲ್ಲಿ ಡಬಲ್ ಡೆಕ್ಕರ್ ಬಸ್ ಪಲ್ಟಿ – ಐವರು ದುರ್ಮರಣ, 16 ಮಂದಿಗೆ ಗಾಯ

1 Min Read

ಲಕ್ನೋ: ಡಬಲ್ ಡೆಕ್ಕರ್ ಬಸ್ (Double-Decker Bus) ಪಲ್ಟಿಯಾದ ಪರಿಣಾಮ ಐವರು ಪ್ರಯಾಣಿಕರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಲಕ್ನೋದಲ್ಲಿ (Lucknow) ನಡೆದಿದೆ.

ಗೋಸಾಯಿ ಗಂಜ್ ಬಳಿಯ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ ವೇಯಲ್ಲಿ (Purvanchal Expressway) ಈ ಘಟನೆ ಸಂಭವಿಸಿದೆ. ಬಸ್ ಲುಧಿಯಾನದಿಂದ ಬಿಹಾರದ ದರ್ಭಂಗಾಗೆ ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಪಲ್ಟಿಯಾದ ಪರಿಣಾಮ ಬಸ್ ತೀವ್ರವಾಗಿ ಹಾನಿಗೊಳಗಾಗಿದ್ದು, ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕ್ರೇನ್‌ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳ ಬಂದ್ – ಮಂಗಳವಾರ ಖಾಸಗಿ ಶಾಲೆಗಳಿಗೆ ರಜೆ

ಬಸ್ ಚಾಲಕ ಬಸ್ ಚಲಾಯಿಸುವಾಗ ನಿದ್ರಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಿಮ್ಮ ಜಿಮ್‌ಗೆ ಸೇರುತ್ತೇನೆ: ಜಿಮ್ ಟ್ರೈನರ್ ಮೊಹಮ್ಮದ್ ದೀಪಕ್ ಭೇಟಿಯಾದ ರಾಹುಲ್ ಗಾಂಧಿ

Share This Article