ಬಿಹಾರ | ಕನ್ವರ್‌ ಯಾತ್ರಾರ್ಥಿಗಳಿದ್ದ ವ್ಯಾನ್ ಕಂದಕಕ್ಕೆ ಪಲ್ಟಿ – ಐವರ ದುರ್ಮರಣ

Public TV
1 Min Read

ಪಾಟ್ನಾ: ಕನ್ವರ್‌ ಯಾತ್ರಾರ್ಥಿಗಳಿದ್ದ (Kanwariyas) ವ್ಯಾನ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಐವರು ಮೃತಪಟ್ಟಿರುವ ಘಟನೆ ಬಿಹಾರದ (Bihar) ಭಗಲ್ಪುರ ಜಿಲ್ಲೆಯ ಶಹಕುಂಡ್‌ನಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಪುರಾನಿ ನಿವಾಸಿಗಳಾದ ಸಂತೋಷ್ ಕುಮಾರ್ (18), ಮನೋಜ್ ಕುಮಾರ್ (24), ವಿಕ್ರಮ್ ಕುಮಾರ್ (23), ಅಂಕುಶ್ ಕುಮಾರ್ (18) ಹಾಗೂ ರವೀಶ್ ಕುಮಾರ್ (18) ಮೃತರೆಂದು ಗುರುತಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು | Forgive Me ಅಂತ ಡೆತ್‌ ನೋಟ್‌ ಬರೆದಿಟ್ಟು 13ರ ಬಾಲಕ ಆತ್ಮಹತ್ಯೆ

ಯಾತ್ರಾರ್ಥಿಗಳು ಶಹಕುಂಡ್‌ನ ಪುರಾನಿ ಖರೈನಿಂದ ಸುಲ್ತಾನಗಂಜ್‌ಗೆ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ನಂತರ ನಂತರ ಜೆಥೌರ್ ನಾಥ್ ದೇವಾಲಯದಲ್ಲಿ ಪೂಜೆ ಮಾಡಲು ಹೊರಟ್ಟಿದ್ದರು ಎನ್ನಲಾಗಿದೆ. ವಾಹನದಲ್ಲಿ ಒಟ್ಟು 9 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಸ್ಥಿತಿ ಗಂಭೀರವಾಗಿದ್ದು, ಇನ್ನುಳಿದವರು ಸಣ್ಣ-ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ವಿಧಿವಶ

ಶಹಕುಂಡ್ ಸುಲ್ತಾನಗಂಜ್ ಮುಖ್ಯ ರಸ್ತೆಯಲ್ಲಿರುವ ಮಹತೋ ಸ್ಥಾನದ ಬಳಿ ಆಟೋ ರಿಕ್ಷಾವನ್ನು ಓವರ್‌ಟೇಕ್ ಮಾಡುವ ಭರದಲ್ಲಿ ವ್ಯಾನ್‌ಗೆ ವಿದ್ಯುತ್ ತಂತಿಗೆ ತಗುಲಿತ್ತು. ಚಾಲಕನಿಗೆ ವಿದ್ಯುತ್ ಸ್ಪರ್ಶಿಸಿ ವ್ಯಾನ್ ನಿಯಂತ್ರಣ ತಪ್ಪಿ ಕಂದಕ್ಕೆ ಉರುಳಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Share This Article