ರಸ್ತೆಯಿಂದ ಉರುಳಿದ 2 ಕಾರುಗಳು ಮರಕ್ಕೆ ಡಿಕ್ಕಿ – ಐವರ ಸಾವು, ಹಲವರಿಗೆ ಗಾಯ

Public TV
1 Min Read

(ಸಾಂದರ್ಭಿಕ ಚಿತ್ರ)

ಜೈಪುರ: ಎರಡು ಕಾರುಗಳು ರಸ್ತೆಯಿಂದ ಉರುಳಿ ಬಿದ್ದು ಮರಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ರಾಜಸ್ಥಾನದ (Rajasthan) ಹನುಮಾನ್‌ಗಢದಲ್ಲಿ ನಡೆದಿದೆ.

ಭಾನುವಾರ ರಾತ್ರಿ ಹರಿಯಾಣದಿಂದ (Haryana) ಗೊಗಮೇಡಿ ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭ ತಿರುವಿನಲ್ಲಿ ಕಾರು ನಿಯಂತ್ರಿಸಲು ಸಾಧ್ಯವಾಗದೆ ರಸ್ತೆಯಿಂದ ಉರುಳಿ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ರಾತ್ರಿಯಾಗಿದ್ದರಿಂದ ಕಾರು ಚಾಲಕರು ತಿರುವು ಇರುವುದನ್ನು ಗಮನಿಸದೆ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದಾರೆ. ಅತಿ ವೇಗವಾಗಿ ಬಂದಿದ್ದರಿಂದ ತಿರುವಿನಲ್ಲಿ ಕಾರು ನಿಯಂತ್ರಣಕ್ಕೆ ಸಿಗದೆ ಈ ಘಟನೆ ನಡೆದಿದೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: ಮೊಬೈಲ್‌ ಕೊಡದ್ದಕ್ಕೆ ಚಾಕುವಿನಿಂದ ಚುಚ್ಚಿ ಯುವಕನ ಹತ್ಯೆಗೈದ ಪಾನಮತ್ತ ಮಹಿಳೆ

ಭಿರಾನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮದುವೆ ಮನೆಯಲ್ಲಿ ಸಾವಿನ ಸೂತಕ – ಕುದಿಯುವ ರಸಂ ಪಾತ್ರೆಗೆ ಬಿದ್ದು ಯುವಕ ಸಾವು

Share This Article