ಪೂಂಚ್‌ನಲ್ಲಿ ದುರಂತ – 300 ಅಡಿಯ ಆಳದ ಕಣಿವೆಗೆ ಬಿದ್ದ ಸೇನಾ ವಾಹನ, 5 ಮಂದಿ ಬಲಿ

Public TV
1 Min Read

ಶ್ರೀನಗರ: 18 ಸೈನಿಕರು ಪ್ರಯಾಣಿಸುತ್ತಿದ್ದ ಸೇನಾ ವಾಹನ (Army Vehicle) 300 ಅಡಿ ಆಳದ ಕಣಿವೆಗೆ ಉರುಳಿದ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪೂಂಚ್ ಜಿಲ್ಲೆಯ ಬಲ್ನೋಯಿ ಪ್ರದೇಶದಲ್ಲಿ ನಡೆದಿದೆ.

ಮೆಂಧಾರ್‌ನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ನಡೆದ ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು ಸದ್ಯ 5 ಮಂದಿ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ. ಗಾಯಗೊಂಡವರ ಪೈಕಿ ಹಲವು ಸೈನಿಕರ ಸ್ಥಿತಿ ಗಂಭೀರವಾಗಿದ್ದು ಸಾವು, ನೋವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಹೊಸ ಧಾರ್ಮಿಕ ವಿವಾದ ಕೆದಕಬೇಡಿ ಎಂದಿದ್ದಕ್ಕೆ ಸಿಟ್ಟು – ಭಾಗವತ್ ವಿರುದ್ಧ ಸ್ವಾಮೀಜಿಗಳ ಆಕ್ರೋಶ

ಜಮ್ಮು ಮತ್ತು ಕಾಶ್ಮೀರದಲ್ಲಿನ ಕಡಿದಾದ, ಪರ್ವತಮಯ ಭೂಪ್ರದೇಶದ ಕಾರಣದಿಂದಾಗಿ ಕಾರುಗಳು ಮತ್ತು ಇತರ ವಾಹನಗಳು ಕಣಿವೆ ಉರುಳುವುದು ಸಾಮಾನ್ಯ. ಆದರೆ ಇಂದು ನಡೆದ  ಘಟನೆಗೆ ನಿಜವಾದ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.

Share This Article