ರೆಸಾರ್ಟ್‌ನಲ್ಲಿ ಒಂದು ರಾತ್ರಿ ತಂಗಲು 5.5 ಲಕ್ಷ ರೂ.!

Public TV
2 Min Read

-ತಮ್ಮ ಅನುಭವ ಹಂಚಿಕೊಂಡ ಭಾರತೀಯ ದಂಪತಿ

ನೈರೋಬಿ: ಕೀನ್ಯಾದ ಮಸಾಯಿ ಮಾರಾದಲ್ಲಿರುವ (Maasai Mara) ರೆಸಾರ್ಟ್‌ನಲ್ಲಿ ಒಂದು ರಾತ್ರಿ ತಂಗಲು 5.5ಲಕ್ಷ ರೂ.ಯಂತೆ. ಹೌದು ಈ ಕುರಿತು ಭಾರತೀಯ ಮೂಲದ ದಂಪತಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಕೀನ್ಯಾದ (Kenya) ಮಸಾಯಿ ಮಾರಾದಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ತಂಗಿದ್ದ ಭಾರತೀಯ ದಂಪತಿ ಅನಿರ್ಬನ್ ಚೌಧರಿ ಹಾಗೂ ಅವರ ಪತ್ನಿ ಎಕ್ಸ್ ಖಾತೆಯಲ್ಲಿ ತಮ್ಮ ಅದ್ಭುತ ಅನುಭವಗಳನ್ನು ಹಂಚಿಕೊಂಡಿದ್ದು, ಲಕ್ಷಾಂತರ ಮೆಚ್ಚುಗೆ, ವೀಕ್ಷಣೆ ಹಾಗೂ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.ಇದನ್ನೂ ಓದಿ: ಪೇನ್ ಕಿಲ್ಲರ್ ಮಾತ್ರೆಗಳಿಂದ ಆತಂಕ, ನಿಯಂತ್ರಣಕ್ಕೆ ಕ್ರಮ: ಪರಮೇಶ್ವರ್

ಅನಿರ್ಬನ್ ಚೌಧರಿ ಹಾಗೂ ಅವರ ಪತ್ನಿ ಮಸಾಯಿ ಮಾರಾದ ಮ್ಯಾರಿಯೋಟ್‌ನ ಅತ್ಯಂತ ವಿಶೇಷವಾದ ಮತ್ತು ದುಬಾರಿ ರೆಸಾರ್ಟ್ಗಳಲ್ಲಿ ಒಂದಾದ ‘ಜೆಡಬ್ಲ್ಯೂ  ಮ್ಯಾರಿಯೋಟ್ ಮಸಾಯಿ ಮಾರಾ’ (JW Marriott Masai Mara) ರೆಸಾರ್ಟ್‌ನಲ್ಲಿನ ತಮ್ಮ ಅನುಭವದ ಖಜಾನೆಯನ್ನು ಬಿಚ್ಚಿಟ್ಟಿದ್ದಾರೆ.

ಅನಿರ್ಬನ್ ಚೌಧರಿ ಅವರು ತಮ್ಮ ಪ್ರವಾಸದ ಕುರಿತು ಸಂಪೂರ್ಣ ಡಾಕ್ಯುಮೆಂಟ್ ಮಾಡಿದ್ದಾರೆ. ಆ ರೆಸಾರ್ಟ್‌ನಲ್ಲಿ ಒಂದು ರಾತ್ರಿಗೆ 5.5 ಲಕ್ಷ ರೂ. ಪಾವತಿಸಬೇಕು. ರೆಸಾರ್ಟ್‌ನ ಒಳನೋಟ, ವಸತಿ, ಊಟ, ಆಟಗಳು ಸೇರಿದಂತೆ ಇನ್ನಿತರ ಸೌಲಭ್ಯಗಳ ಕುರಿತು ಹಂಚಿಕೊಂಡಿದ್ದಾರೆ ಹಾಗೂ ಆ ರೆಸಾರ್ಟ್ ಒಳಗೊಂಡಿರುವ ಸಂಪೂರ್ಣ ಪ್ಯಾಕೆಜ್‌ನ ಬಗ್ಗೆ ಮಾಹಿತಿ ನೀಡಿದ್ದಾರೆ. ಕುದುರೆ ಸವಾರಿ, ಬಿಸಿ ಗಾಳಿಯ ಬಲೂನ್ ಸವಾರಿಗಳು ಮತ್ತು ಮಸಾಯಿ ಗ್ರಾಮ ಪ್ರವಾಸಗಳು ಸೇರಿದಂತೆ ಇತರ ಪಾವತಿಸಿದ ಚಟುವಟಿಕೆಗಳನ್ನು ವಿವರಿಸಿದ್ದಾರೆ.

ನೀವು ಐಷಾರಾಮಿ ಸಫಾರಿಯ ಬಗ್ಗೆ ಕಾಣುತ್ತಿದ್ದರೆ ಇದು ಒಂದು ಒಳ್ಳೆಯ ಅನುಭವವನ್ನು ನೀಡುತ್ತದೆ. ಪ್ರತಿ ಹಂತದಲ್ಲಿಯೂ ಅಲ್ಲಿಯ ಅನುಭವವು ದ್ವಿಗುಣಗೊಳ್ಳುತ್ತದೆ. ನಾನು ಈ ಹಿಂದೆ ಈ ರೀತಿಯ ರೆಸಾರ್ಟ್‌ಗೆ ಭೇಟಿ ನೀಡಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರ 5 ವರ್ಷ ಪೂರ್ಣ ಮಾಡಲ್ಲ: ಸಿದ್ದರಾಮಯ್ಯ

ಕೆಲವು ದಿನಗಳ ಹಿಂದೆ ಪೋಸ್ಟ್ ಅನ್ನು ಹಂಚಿಕೊಂಡಿದ್ದು, 15 ಲಕ್ಷ ವೀಕ್ಷಣೆಗಳು ಮತ್ತು ಹಲವಾರು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.

Share This Article