5 ಬೆಸ್ಟ್ ಆಧ್ಯಾತ್ಮಿಕ ಟ್ಯಾಟೂ ಡಿಸೈನ್‍ಗಳು

Public TV
1 Min Read

ಆಧ್ಯಾತ್ಮಿಕ ಟ್ಯಾಟೂಗಳು ಟ್ರೆಂಡಿಂಗ್ ಲೋಕದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಸಾಮಾನ್ಯವಾಗಿ ಹಲವಾರು ಮಂದಿ ಹೆಸರು, ಹೂ, ಚಿಟ್ಟೆ, ಗೊಂಬೆ ಹೀಗೆ ಹಲವಾರು ವಿನ್ಯಾಸದ ಟ್ಯಾಟೂಗಳನ್ನು ಹಾಕಿಸಿಕೊಳ್ಳುವುದನ್ನು ನೋಡಿದ್ದೇವೆ. ಈ ಮಧ್ಯೆ ಕೆಲವರು ದೇವರ ಟ್ಯಾಟೂಗಳನ್ನು ಹಾಕಿಕೊಳ್ಳುತ್ತಾರೆ. ಈ ಟ್ಯಾಟೂಗಳು ಭಾರತದ ಸಾಂಸ್ಕೃತಿಕ ಹಾಗೂ ಧಾರ್ಮಿಕತೆಯನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಶಿವ ಕುರಿತ ಟ್ಯಾಟೂವನ್ನು ಮಹಿಳೆಯರು ಮತ್ತು ಪುರುಷರು ಹೆಚ್ಚಾಗಿ ಇಷ್ಟ ಪಡುತ್ತಾರೆ. ಜೊತೆಗೆ ಗಣೇಶನ ಟ್ಯಾಟೂ ಹೊಸ ಆರಂಭವನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಕೆಲವರು ಹೊಸ ಪ್ರಯಾಣವನ್ನು ಆರಂಭಿಸಲು ಬಯಸುವವರು ಗಣೇಶನ ಟ್ಯಾಟೂವನ್ನು ಬಹಳ ಹಾಕಿಸಿಕೊಳ್ಳುತ್ತಾರೆ.

ಸಾಮಾನ್ಯವಾಗಿ ಹಿಂದೂಗಳು ಜೀವನ ಚಕ್ರವನ್ನು ಮತ್ತು ಪೂರ್ವಜನ್ಮದ ಕರ್ಮವನ್ನು ನಂಬುತ್ತಾರೆ. ಭಾರತದಲ್ಲಿ ಹೆಚ್ಚಾಗಿ ಹಿಂದೂಗಳಿದ್ದು, ಹಿಂದೂ ದೇವರ ಟ್ಯಾಟೂಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಅದರಲ್ಲಿ ಕೆಲವೊಂದು ಹಿಂದೂ ದೇವರ ಟ್ಯಾಟೂ ಡಿಸೈನ್‍ಗಳು ಈ ಕೆಳಗಿನಂತಿದೆ.

ಗಣೇಶನ ಟ್ಯಾಟೂ
ಗಣೇಶನ ಟ್ಯಾಟೂವನ್ನು ಕಪ್ಪು ಮತ್ತು ನೀಲಿ ಇಂಕ್ ಮೂಲಕ ವಿನ್ಯಾಸಗೊಳಿಸಿದರೆ ಬಹಳ ಸುಂದರವಾಗಿ ಕಾಣಿಸುತ್ತದೆ. ಈ ಚಿಕ್ಕ ಟ್ಯಾಟೂವನ್ನು ನಿಮ್ಮ ಕಾಲಿನ ಮೇಲೆ ಅಥವಾ ಕೈ ಮೇಲೆ ಹಾಕಿಸಿಕೊಳ್ಳಬಹುದು.

ಕೃಷ್ಣನ ಟ್ಯಾಟೂ
ಈ ಟ್ಯಾಟೂವನ್ನು ನೀಲಿ, ಕೆಂಪು ಮತ್ತು ಹಳದಿ ಬಣ್ಣದ ಮೂಲಕ ವಿನ್ಯಾಸಗೊಳಿಸಲಾಗಿದ್ದು, ಈ ಟ್ಯಾಟೂ ಹಾಕಲು 3 ಗಂಟೆಗಳ ಕಾಲ ಸಮಯಬೇಕಾಗುತ್ತದೆ.

ಮಹಾಕಾಳಿ ಟ್ಯಾಟೂ
ಸಾಮಾನ್ಯವಾಗಿ ಬ್ರೈಟ್ ಆಗಿ ಕಾಣಿಸುವ ಈ ಟ್ಯಾಟೂ ಬಹಳ ಪವರ್ ಫುಲ್ ಟ್ಯಾಟೂ ಎಂದೇ ಹೇಳಬಹುದು. ಈ ಟ್ಯಾಟೂವನ್ನು ಸಾಮಾನ್ಯವಾಗಿ ಹೆಚ್ಚಾಗಿ ಪುರುಷರು ಹಾಕಿಸಿಕೊಳ್ಳುತ್ತಾರೆ.

ಶಿವನ ಟ್ಯಾಟೂ
ನೀಲಿ ಇಂಕ್ ಮೂಲಕ ಈ ಟ್ಯಾಟೂವನ್ನು ವಿನ್ಯಾಸಗೊಳಿಸಲಾಗಿದ್ದು, ಎಲ್ಲರ ಮಧ್ಯೆ ಶಿವನ ಟ್ಯಾಟೂ ಬ್ರೈಟ್ ಆಗಿ ಎದ್ದು ಕಾಣಿಸುತ್ತದೆ. ಈ ಟ್ಯಾಟೂವನ್ನು ವಿನ್ಯಾಸಗೊಳಿಸಲು ಹೆಚ್ಚು ಸಮಯ ಬೇಕಾಗುತ್ತದೆ.

ರಾಮನ ಟ್ಯಾಟೂ
ಈ ಟ್ಯಾಟೂವಿನಲ್ಲಿ ರಾಮ ಬಾಣ ಬಿಡುತ್ತಿದ್ದು, ಇದನ್ನು ಕೆಂಪು, ನೀಲಿ, ಹಸಿರು ಬಣ್ಣವನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *