ಉತ್ತರಾಖಂಡ್ ಒಂದೇ ಜೈಲಿನ 44 ಕೈದಿಗಳಿಗೆ ಹೆಚ್‍ಐವಿ ಪಾಸಿಟಿವ್

Public TV
1 Min Read

ಡೆಹ್ರಡೂನ್: ಉತ್ತರಾಖಂಡ್‍ನ ಹಲ್ದ್ವಾನಿಯ (Haldwani) ಜೈಲಿನಲ್ಲಿ 44 ಕೈದಿಗಳಿಗೆ (Prisoners) ಹೆಚ್‍ಐವಿ (HIV) ಇರುವುದು ಪತ್ತೆಯಾಗಿದೆ. ಒಬ್ಬ ಮಹಿಳಾ ಖೈದಿ ಕೂಡ ಹೆಚ್‍ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಸುಶೀಲಾ ತಿವಾರಿ ಆಸ್ಪತ್ರೆಯ ಎಆರ್‌ಟಿ ಸೆಂಟರ್‌ನ (ART Center) ಡಾ.ಪರಮ್‍ಜಿತ್ ಸಿಂಗ್ ತಿಳಿಸಿದ್ದಾರೆ.

ಜೈಲಿನಲ್ಲಿ ಹೆಚ್‍ಐವಿ ಪಾಸಿಟಿವ್ ಕೈದಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದು ಜೈಲು ಆಡಳಿತದಲ್ಲಿ ಸಂಚಲನ ಮೂಡಿಸಿದೆ ಎಂದು ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: 1,100 ಕೋಳಿಗಳನ್ನು ಹೆದರಿಸಿ ಕೊಂದಿದ್ದ ವ್ಯಕ್ತಿಗೆ ಜೈಲು

ಹೆಚ್‍ಐವಿ ರೋಗಿಗಳಿಗೆ ಎಆರ್‌ಟಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಲ್ಲಿ ಸೋಂಕಿತ ರೋಗಿಗಳಿಗೆ ಚಿಕಿತ್ಸೆ (Treatment) ನೀಡಲಾಗುತ್ತದೆ. ವೈದ್ಯರ ತಂಡ ಜೈಲಿನಲ್ಲಿರುವ ಕೈದಿಗಳನ್ನು ನಿರಂತರವಾಗಿ ಪರೀಕ್ಷಿಸುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.

ಹೆಚ್‍ಐವಿ ಸೋಂಕಿಗೆ ಒಳಗಾಗಿರುವ ರೋಗಿಗಳಿಗೆ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ (NACO) ಮಾರ್ಗಸೂಚಿಗಳ ಆಧಾರದ ಮೇಲೆ ಉಚಿತ ಚಿಕಿತ್ಸೆ ಮತ್ತು ಔಷಧಗಳನ್ನು ನೀಡಲಾಗುತ್ತದೆ. ಪ್ರಸ್ತುತ 1,629 ಪುರುಷ ಮತ್ತು 70 ಮಹಿಳಾ ಕೈದಿಗಳಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕೈದಿಗಳು ಹೆಚ್‍ಐವಿ ಪಾಸಿಟಿವ್‍ಗೆ ತುತ್ತಾದ ಬಳಿಕ ಜೈಲು ಆಡಳಿತ ದಿನನಿತ್ಯ ತಪಾಸಣೆ ನಡೆಸುತ್ತಿದೆ. ಇದರಿಂದ ಹೆಚ್‍ಐವಿ ಸೋಂಕಿತ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಯುರೋಪ್ ರಾಷ್ಟ್ರಗಳು ಅಮೆರಿಕ ಅವಲಂಬನೆ ಬಿಡಬೇಕು : ಫ್ರಾನ್ಸ್ ಅಧ್ಯಕ್ಷ

Share This Article