ವಿಯೆಟ್ನಾಂನಲ್ಲಿ ಭಾರೀ ಮಳೆಗೆ ಪ್ರವಾಹ, ಭೂಕುಸಿತ; 41 ಮಂದಿ ಸಾವು

1 Min Read

ಹನೋಯ್: ವಿಯೆಟ್ನಾಂನಲ್ಲಿ (Vietnam Flood) ಧಾರಾಕಾರ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತಗಳಲ್ಲಿ 41 ಜನರು ಸಾವನ್ನಪ್ಪಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಮಧ್ಯ ವಿಯೆಟ್ನಾಂನ ಹಲವಾರು ಭಾಗಗಳಲ್ಲಿ 150 ಸೆಂ.ಮೀ (60 ಇಂಚು) ಗಿಂತ ಹೆಚ್ಚಿನ ಮಳೆಯಾಗಿದೆ. ಇದು ಪ್ರಮುಖ ಕಾಫಿ ಉತ್ಪಾದನಾ ವಲಯ ಮತ್ತು ದೇಶದ ಅತ್ಯಂತ ಜನಪ್ರಿಯ ಕಡಲತೀರಗಳಿಗೆ ನೆಲೆಯಾಗಿದೆ. ಇದನ್ನೂ ಓದಿ: ದುಬೈ ಏರ್‌ಶೋನಲ್ಲಿ ತೇಜಸ್‌ ಯುದ್ಧ ವಿಮಾನ ಪತನ!

ಭಾನುವಾರದಿಂದ ಇಲ್ಲಿ ವರೆಗೆ ಆರು ಪ್ರಾಂತ್ಯಗಳಲ್ಲಿ ಕನಿಷ್ಠ 41 ಜನರು ಸಾವನ್ನಪ್ಪಿದ್ದಾರೆ. 52,000 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಸುಮಾರು 62,000 ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಆದರೆ, ಭೂಕುಸಿತಗಳಿಂದಾಗಿ ಹಲವಾರು ಪ್ರಮುಖ ರಸ್ತೆಗಳು ಮುಚ್ಚಿಹೋಗಿವೆ. 10 ಲಕ್ಷಕ್ಕೂ ಹೆಚ್ಚು ಮಂದಿ ವಿದ್ಯುತ್ ಸಂಪರ್ಕ ಕಡಿತದ ಸಮಸ್ಯೆ ಎದುರಿಸುತ್ತಿದ್ದಾರೆ.

ಲ್ಯಾಮ್ ಡಾಂಗ್ ಪ್ರಾಂತ್ಯದ ಡಾ. ನಿಮ್ ನದಿಯ ಮೇಲಿನ ತೂಗು ಸೇತುವೆ ಗುರುವಾರ ಬೆಳಗ್ಗೆ ಕೊಚ್ಚಿ ಹೋಗಿದೆ ಎಂದು ವಿಯೆಟ್ನಾಂನೆಟ್ ಪತ್ರಿಕೆ ವರದಿ ಮಾಡಿದೆ. ನಗರದಲ್ಲಿ ನೆಲ ಅಂತಸ್ತಿನ ರೆಸ್ಟೋರೆಂಟ್‌ಗಳು ಮತ್ತು ಅಂಗಡಿಗಳು ಸುಮಾರು ಒಂದು ಮೀಟರ್ (3.2 ಅಡಿ) ನೀರಿನಲ್ಲಿ ಮುಳುಗಿವೆ.

ಶುಕ್ರವಾರ ಹೆಚ್ಚಿನ ಪ್ರವಾಹ ಮತ್ತು ಭೂಕುಸಿತ ಸಂಭವಿಸುವ ಬಗ್ಗೆ ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಪ್ರದೇಶದಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಇದನ್ನೂ ಓದಿ: Pakistan | ಅಂಟು ತಯಾರಿಸುವ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ – 15 ಕಾರ್ಮಿಕರು ಸಾವು, 7 ಮಂದಿಗೆ ಗಾಯ

Share This Article