ರಾಜ್ಯಸಭಾ ಚುನಾವಣೆ; ಬಿಜೆಪಿಗೆ ಅಡ್ಡಮತದಾನ ಮಾಡಿದ್ದ ನಾಲ್ವರು ಎಸ್‌ಪಿ ಶಾಸಕರಿಗೆ ‘ವೈ’ ಕೆಟಗರಿ ಭದ್ರತೆ

Public TV
1 Min Read

ಲಕ್ನೋ: ಫೆ.27 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಡ್ಡ ಮತದಾನ ಮಾಡಿದ ಸಮಾಜವಾದಿ ಪಕ್ಷದ ನಾಲ್ವರು ಶಾಸಕರಿಗೆ ವೈ-ಕೆಟಗರಿ ಭದ್ರತೆ ನೀಡಲಾಗಿದೆ.

ಅಭಯ್ ಸಿಂಗ್ (ಗೋಸೈಗಂಜ್), ಮನೋಜ್ ಕುಮಾರ್ ಪಾಂಡೆ (ಉಂಚಹರ್), ರಾಕೇಶ್ ಪ್ರತಾಪ್ ಸಿಂಗ್ (ಗೌರಿಗಂಜ್) ಮತ್ತು ವಿನೋದ್ ಚತುರ್ವೇದಿ (ಕಲ್ಪಿ) ಶಾಸಕರು ವೈ-ಕೆಟಗರಿ ಭದ್ರತೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಲೇಹ್‌ನಲ್ಲಿ ಸೈನಿಕರೊಂದಿಗೆ ಹೋಳಿ ಆಚರಿಸಿದ ರಾಜನಾಥ್ ಸಿಂಗ್

ಈ ನಾಲ್ವರು ಶಾಸಕರು ಹಾಗೂ ಇತರ ಮೂರು ಪಕ್ಷದ ಶಾಸಕರಾದ ಪೂಜಾ ಪಾಲ್, ರಾಕೇಶ್ ಪಾಂಡೆ ಮತ್ತು ಅಶುತೋಷ್ ಮೌರ್ಯ, ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಡ್ಡ ಮತದಾನ ಮಾಡಿದ್ದರು. ಕೇಸರಿ ಪಕ್ಷದ ಅಭ್ಯರ್ಥಿ ಸಂಜಯ್ ಸೇಠ್ ಅವರಿಂದ, ಸಮಾಜವಾದಿ ಪಕ್ಷದ ಅಭ್ಯರ್ಥಿ ಅಲೋಕ್ ರಂಜನ್ ಸೋಲಿಗೆ ಈ ಬೆಳವಣಿಗೆ ಕಾರಣವಾಯಿತು.

ಮತ್ತೊಬ್ಬ ಶಾಸಕ ಮಹಾರಾಜಿ ಪ್ರಜಾಪತಿ ಗೈರಾಗಿದ್ದರು. ರಾಕೇಶ್ ಪಾಂಡೆ ಅವರು ಸಂಸದ ರಿತೇಶ್ ಪಾಂಡೆ ಅವರ ತಂದೆ. ಅವರು ಇತ್ತೀಚೆಗೆ ಬಿಎಸ್ಪಿಯಿಂದ ಬಿಜೆಪಿಗೆ ಸೇರಿದ್ದರು. ಇದನ್ನೂ ಓದಿ: ನಿವೃತ್ತ ವಾಯುಸೇನೆ ಮುಖ್ಯಸ್ಥ ಭದೌರಿಯಾ ಬಿಜೆಪಿ ಸೇರ್ಪಡೆ

ವೈ-ಕೆಟಗರಿ ಭದ್ರತೆಯ ಭಾಗವಾಗಿ ಎಂಟು ಸಿಆರ್‌ಪಿಎಫ್ ಸಿಬ್ಬಂದಿ ಈ ಶಾಸಕರ ಕಾವಲು ಕಾಯಲಿದ್ದಾರೆ. ಐವರು ಸಿಬ್ಬಂದಿಯು ಶಾಸಕರ ನಿವಾಸದಲ್ಲಿ ಕಾವಲಾಗಿರುತ್ತಾರೆ. ಉಳಿದವರು ಶಾಸಕರೊಂದಿಗೆ ಪ್ರಯಾಣಿಸುತ್ತಾರೆ.

Share This Article