ಟ್ರಕ್, ಕಾರು ಮುಖಾಮುಖಿ ಡಿಕ್ಕಿ – ನಾಲ್ವರು ಸಾವು, ಇಬ್ಬರು ಗಂಭೀರ

Public TV
1 Min Read

ಲಕ್ನೋ: ಟ್ರಕ್ (Truck) ಹಾಗೂ ಕಾರಿನ (Car) ಮಧ್ಯೆ ಭೀಕರ ಅಪಘಾತ ಉಂಟಾದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಶಹಜಹಾನ್‌ಪುರದಲ್ಲಿ (Shahjahanpur) ನಡೆದಿದೆ.

ಶುಕ್ರವಾರ ತಡರಾತ್ರಿ 11 ಗಂಟೆಯ ಸುಮಾರಿಗೆ ಅಲ್ಲಾಹಂಗಾಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮೃತರನ್ನು ರಾಹುಲ್ ಕುಮಾರ್ (25), ವಿನಯ್ ಶರ್ಮಾ (27), ಆಕಾಶ್ (22) ಮತ್ತು ಗೋಪಾಲ್ (24) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: 76ನೇ ಗಣರಾಜೋತ್ಸವಕ್ಕೆ ಸಕಲ ಸಿದ್ಧತೆ – ಭದ್ರತೆ ಹೇಗಿದೆ?

ಮೃತರು ಗೋರಾ ಮತ್ತು ದಹೇನಾ ಗ್ರಾಮಗಳ ನಿವಾಸಿಗಳಾಗಿದ್ದು, ಶುಕ್ರವಾರ ರಾತ್ರಿ ಕಟೇಲಿ ಗ್ರಾಮದ ಬಳಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಎದುರಿಗೆ ಬಂದ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯ ಬಳಿಕ ಟ್ರಕ್ ಅನ್ನು ಅಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಟ್ರಕ್ ಅನ್ನು ವಶಪಡಿಸಿಕೊಂಡಿದ್ದು, ಚಾಲಕನಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಇದನ್ನೂ ಓದಿ: ಬಣಗಳ ಗುದ್ದಾಟ – ರಾಮುಲು, ರೆಡ್ಡಿ ಗಲಾಟೆ| ಕಡೆಗೂ ಆರ್‌ಎಸ್‌ಎಸ್‌ ಎಂಟ್ರಿ

Share This Article