ಒಂದೇ ವಾಟ್ಸಪ್‌ ನಂಬರ್‌ನ್ನು 4 ಡಿವೈಸ್‌ಗಳಿಗೆ ಕನೆಕ್ಟ್‌ ಮಾಡಿ

Public TV
1 Min Read

– ಬೀಟಾ ಅವೃತ್ತಿಯ ಬಳಕೆದಾರರಿಗೆ ಲಭ್ಯ
– ಶೀಘ್ರವೇ ಸಿಗಲಿದೆ ಎಲ್ಲ ಬಳಕೆದಾರರಿಗೆ ಫೀಚರ್‌

ಕ್ಯಾಲಿಫೋರ್ನಿಯಾ: ಇನ್ನು ಮುಂದೆ ನೀವು ಒಂದೇ ವಾಟ್ಸಪ್‌ ನಂಬರ್‌ ಅನ್ನು 4 ಡಿವೈಸ್‌ಗಳಲ್ಲಿ ಬಳಸಬಹುದು.

ಇಲ್ಲಿಯವರೆಗೆ ವಾಟ್ಸಪ್‌ ನಂಬರ್‌ ಒಂದು ಫೋನಿಗೆ ಮಾತ್ರ ಬಳಕೆಯಾಗುತ್ತಿತ್ತು. ಆದರೆ ಇನ್ನು ಮುಂದೆ ಆ ಖಾತೆಯನ್ನು 4 ಸಾಧನಗಳಲ್ಲಿ ಬಳಸುವಂತೆ ಅಪ್‌ಡೇಟ್‌ ಮಾಡಲು ಫೇಸ್‌ಬುಕ್‌ ಮಾಲೀಕತ್ವದ ವಾಟ್ಸಪ್‌ ಮುಂದಾಗುತ್ತಿದೆ.

4 ಡಿವೈಸ್‌ಗಳಿಗೆ ಸಪೋರ್ಟ್‌ ಮಾಡುವ ಸಂಬಂಧ ವಾಟ್ಸಪ್‌ ಹಲವು ದಿನಗಳಿಂದ ಟೆಸ್ಟ್‌ ಮಾಡುತ್ತಿದ್ದು ಈಗ ಲಭ್ಯವಾಗಿದೆ. ಈ ವಿಶೇಷತೆ ಅಧಿಕೃತವಾಗಿ ಪ್ರಕಟವಾಗಿಲ್ಲ. ಈಗ ವಾಟ್ಸಪ್‌ ಬೀಟಾ ಆವೃತ್ತಿ ಅಪ್ಲಿಕೇಶನ್‌ ಬಳಸುವ ಮಂದಿಗೆ ಈ ವಿಶೇಷತೆ ಲಭ್ಯವಾಗಿದೆ.

ಬೀಟಾ ಅವೃತ್ತಿಯನ್ನು ಬಳಸುವ ಎಲ್ಲರಿಗೆ ಇದು ಲಭ್ಯವಾಗಿಲ್ಲ. ಆಯ್ದ ಕೆಲ ಬಳಕೆದಾರರಿಗೆ ಈ ವಿಶೇಷತೆ ಲಭ್ಯವಾಗಿದೆ ಎಂದು wabetainfo ವರದಿ ಮಾಡಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ?
ವಾಟ್ಸಪ್‌ ಮುಖಪುಟದ ಬಲ ತುದಿಯಲ್ಲಿರುವ ಮೂರು ಚುಕ್ಕೆಗಳನ್ನು(ಮೆನು ಬಟನ್) ಒತ್ತಿದಾಗ ‘Linked Device’ ಕಾಣುತ್ತದೆ. ಇಲ್ಲಿ ಆಯ್ಕೆ ಮಾಡಿಕೊಂಡು ಈ ವಿಶೇಷತೆಯನ್ನು ಬಳಕೆದಾರರು ಬಳಸಬಹುದಾಗಿದೆ. ಬಳಕೆದಾರು ಡೆಸ್ಕ್‌ಟಾಪ್‌ ಆವೃತ್ತಿಯ ವಾಟ್ಸಪ್‌ ವೆಬ್‌ ಮೂಲಕ 4 ಸಾಧನಗಳನ್ನು ಬಳಸಬಹುದಾಗಿದೆ.

ಈಗಾಗಲೇ ಕೆಲ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಡೆಸ್ಟ್‌ಟಾಪ್‌/ಲ್ಯಾಪ್‌ಟಾಪ್‌ ಮೂಲಕ 4ಕ್ಕಿಂತ ಹೆಚ್ಚು ಸಾಧನಗಳನ್ನು ಕನೆಕ್ಟ್‌ ಮಾಡಲು ಸಾಧ್ಯವಿದೆ. ಡೆಸ್ಟ್‌ಟಾಪ್‌ ಅವೃತ್ತಿ ಓಪನ್‌ ಮಾಡಿ ಫೋನ್‌ ನಂಬರ್‌ ಒತ್ತಿದಾಗ ಒಂದು ಒಟಿಪಿ(ಒನ್‌ ಟೈಂ ಪಾಸ್‌ವರ್ಡ್‌) ಬರುತ್ತದೆ. ಈ ಒಟಿಪಿಯನ್ನು ನಮೂದಿಸಿದಾಗ ಡೆಸ್ಟ್‌ಟಾಪ್‌ನಲ್ಲೂ ಆ ಅಪ್ಲಿಕೇಶನ್‌ ಬಳಸಬಹುದು.

ಈಗ ವಾಟ್ಸಪ್‌ ವೆಬ್‌ ಮೂಲಕ ಡೆಸ್ಟ್‌ ಟಾಪ್‌ನಲ್ಲಿ ವಾಟ್ಸಪ್‌ ಓಪನ್‌ ಮಾಡಬಹುದಾಗಿದೆ. ಹೀಗಾಗಿ ಈಗ ಕ್ಯೂಆರ್‌ ಕೋಡ್‌ಗಳನ್ನು ಸ್ಕ್ಯಾನ್‌ ಮಾಡಿದಂತೆ ಓಪನ್‌ ಮಾಡಬೇಕಾಗುತ್ತದೋ ಅಥವಾ ಒಟಿಪಿ ಮೂಲಕ ನಾಲ್ಕು ಸಾಧನಗಳು ಕನೆಕ್ಟ್‌ ಆಗುತ್ತದೋ ಎನ್ನುವುದು ತಿಳಿದು ಬಂದಿಲ್ಲ. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾದಾಗ ಈ ಎಲ್ಲ ವಿಚಾರಗಳು ಸ್ಪಷ್ಟವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *