ಶುಭಮನ್ ಗಿಲ್‌ಗೆ ಸಾರಾ ಎಂದು ಕಾಲೆಳೆದ ಫ್ಯಾನ್ಸ್ – ಕೊಹ್ಲಿ ರಿಯಾಕ್ಷನ್ ವೈರಲ್

Public TV
2 Min Read

ಇಂದೋರ್: ಭಾರತ- ನ್ಯೂಜಿಲೆಂಡ್‌ನ ಮೂರನೇ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್‌ಗೆ (Shubman Gill) ಫ್ಯಾನ್ಸ್, “ಸಾರಾ, ಸಾರಾ” ಎಂದು ಕರೆಯುವ ಮೂಲಕ ಕಾಲೆಳೆದಿದ್ದಾರೆ. ಇದಕ್ಕೆ ವಿರಾಟ್ ಕೊಹ್ಲಿ (Virat Kohli) ನೀಡಿರುವ ರಿಯಾಕ್ಷನ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಇಂದೋರ್‌ನಲ್ಲಿ ನಡೆದ 3ನೇ ಪಂದ್ಯದ ವೇಳೆ ನೆರೆದಿದ್ದ ಫ್ಯಾನ್ಸ್ ಸಾರಾ ಸಾರಾ ಹೇಳುವ ಮೂಲಕ ಶುಭಮನ್ ಗಿಲ್‌ಗೆ ಕಿಟಲೆ ನೀಡಲು ಪ್ರಯತ್ನಿಸಿದರು. ನಮ್ಮ ಸಾರಾ ಅತ್ತಿಗೆ ಹೇಗೆ ಇದ್ದಾರೆ ಎಂದು ಪ್ರಶ್ನಿಸಿದ್ದಾರೆ. ಸಾರಾ ಹೆಸರನ್ನು ಜೋರಾಗಿ ಕೂಗುತ್ತಿರುವುದನ್ನು ಕೇಳಿದ ವಿರಾಟ್ ಕೊಹ್ಲಿ ನಗುತ್ತಾ ಪ್ರೇಕ್ಷಕರನ್ನು ನೋಡಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಟ್ವೀಟ್‌ನಲ್ಲಿ ಏನಿದೆ?: ವಿರಾಟ್ ಕೊಹ್ಲಿ 30 ಯಾರ್ಡ್ ವೃತ್ತದೊಳಗೆ ಫೀಲ್ಡಿಂಗ್ ಮಾಡುತ್ತಿದ್ದರು. ಈ ವೇಳೆ ನೆರೆದಿದ್ದ ಪ್ರೇಕ್ಷಕರು ಶುಭಮನ್ ಗಿಲ್‌ಗೆ ಸಾರಾ ಹೆಸರು ಹೇಳಿ ಕೀಟಲೆ ಮಾಡಿದ್ದಾರೆ. ಇದನ್ನು ಕೇಳಿದ ಕೊಹ್ಲಿಗೆ ನಗು ತಡೆಯಲಾರದೇ ಪ್ರೇಕ್ಷಕರ ಕಡೆ ತಿರುಗಿ ನಕ್ಕಿದ್ದಾರೆ. ನಂತರ ಮುಂದುವರಿಸುವಂತೆ ಪ್ರೇಕ್ಷಕರಿಗೆ ಕೈ ಸನ್ನೆ ಮಾಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳಲ್ಲಿ ಒಟ್ಟು 360 ರನ್ ಹೊಡೆದ ಶುಭ್‌ಮನ್ ಗಿಲ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ಹಿಂದೆ ಶುಭಮನ್ ಗಿಲ್‌ನೊಂದಿಗೆ ಬಾಲಿವುಡ್ (Bollywood) ನಟಿ ಸಾರಾ ಅಲಿ ಖಾನ್ (Sara Ali Khan) ಹೆಸರು ಕೇಳಿಬಂದಿತ್ತು. ಇದೀಗ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ರಿಲೇಶನ್ ಶಿಪ್‌ನಲ್ಲಿ ಇದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: ರಾಂಚಿ ರ್‍ಯಾಂಬೋ ಜೊತೆ ಪಾಂಡ್ಯ ವಿಂಟೇಜ್ ಬೈಕ್ ರೈಡಿಂಗ್

 

View this post on Instagram

 

A post shared by Apn ka Indore (@apn_ka_indore)

ಮಂಗಳವಾರ ನಡೆದ ಭಾರತ  (Team India)  ಹಾಗೂ ನ್ಯೂಜಿಲೆಂಡ್ (New Zealand) ನಡುವಿನ ಮೂರನೇ ಹಾಗೂ ಅಂತಿಮ ಪಂದ್ಯವು ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯಿತು. ರೋಹಿತ್ ಶರ್ಮಾ (Rohith Sharma) ಹಾಗೂ ಶುಭಮನ್ ಗಿಲ್ ಅವರ ಶತಕದ ಆಟದಿಂದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 385 ಗಳಿಸಿತ್ತು. ಭಾರೀ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ 295 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲನುಭವಿಸಿತ್ತು. ಈ ಮೂಲಕದ ಭಾರತ, ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಈ ಮೂಲಕ ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನಕ್ಕೆ ಜಿಗಿದಿದೆ. ಇದನ್ನೂ ಓದಿ: 50 ಕೋಟಿ ಮೌಲ್ಯದ ಫ್ಲಾಟ್‌, 2.17 ಕೋಟಿಯ ಕಾರು, 80 ಲಕ್ಷದ ಬೈಕ್ – ರಾಹುಲ್ ದಂಪತಿಗೆ ದುಬಾರಿ ಉಡುಗೊರೆ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *