ಕೋಲಾರ: ಆಷಾಢದ 3ನೇ ಶುಕ್ರವಾರದ ಹಿನ್ನೆಲೆ, ಕೋಲಾರದ (Kolar) ಅಧಿದೇವತೆ ಕೋಲಾರಮ್ಮನಿಗೆ (Kolaramma) 1001 ಹಲಸಿನ ಹಣ್ಣಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ದೇವಾಲಯ ಹಾಗೂ ಉತ್ಸವ ಮೂರ್ತಿಗೆ ಹಲಸಿನ ಹಣ್ಣಿನ ಅಲಂಕಾರ ಮಾಡಲಾಗಿತ್ತು. ಆಷಾಢದ 3ನೇ ಶುಕ್ರವಾರದ ಹಿನ್ನೆಲೆ ದೇವಿಯ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಇದನ್ನೂ ಓದಿ: 3ನೇ ಆಷಾಢ ಸಂಭ್ರಮ; ಗಜ ಲಕ್ಷ್ಮಿ, ನಾಗಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡಿ ತಾಯಿ
ಮೈಸೂರು ಭಾಗಕ್ಕೆ ಹೇಗೆ ತಾಯಿ ಚಾಮುಂಡಿ ಶ್ರೀರಕ್ಷೆ ಇದೆಯೋ ಅದೆ ರೀತಿ ಕೋಲಾರಕ್ಕೆ ಕಾವಲಾಗಿ ನಿಂತಿದ್ದಾಳೆ. ಕೋಲಾರಮ್ಮ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನೆಲೆಸಿರುವ ಚಾಮುಂಡೇಶ್ವರಿಯ ಸಹೋದರಿ ಎನ್ನಲಾಗುತ್ತದೆ. ಇಲ್ಲಿ ದೇವಿಯ ಸುಮಾರು 4 ಅಡಿ ಎತ್ತರದ ಶಿಲೆಯಲ್ಲಿ ಅರಳಿದ ಮೂರ್ತಿ ಇದೆ. ಕೈಯಲ್ಲಿ ತ್ರಿಶೂಲ, ವಿಗ್ರಹದ ಅಡಿಯಲ್ಲಿ ರಾಕ್ಷಸನನ್ನು ಸಂಹಾರ ಮಾಡುತ್ತಿರುವ ಭಂಗಿ ಭಕ್ತರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇದನ್ನೂ ಓದಿ: 2ನೇ ಆಷಾಢ ಶುಕ್ರವಾರ – ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಾಮುಂಡಿ ತಾಯಿ