ಬೋನಿ ಕಪೂರ್ ಕುಟುಂಬಕ್ಕೆ ಸೇರಿದ 39 ಲಕ್ಷ ಮೌಲ್ಯದ ಬೆಳ್ಳಿ ವಶ

Public TV
1 Min Read

ದಾವಣಗೆರೆ: ಬಾಲಿವುಡ್ ಖ್ಯಾತ ನಟಿ ದಿವಂಗತ ಶ್ರೀದೇವಿ (Sridevi) ಪತಿ ಬೋನಿ ಕಪೂರ್ (Boni Kapoor) ಕುಟುಂಬಕ್ಕೆ ಸೇರಿದ ಬೆಳ್ಳಿ ಹಾಗೂ ಕಾರನ್ನು ಪೊಲೀಸರು ದಾವಣಗೆರೆಯಲ್ಲಿ ವಶಕ್ಕೆ ಪಡೆದಿದ್ದಾರೆ.

ಚುನಾವಣೆ ಹೊತ್ತಲ್ಲೆ ದಾವಣಗೆರೆ ತಾಲೂಕಿನ ಹೆಬ್ಬಾಳ ಟೋಲ್ ಬಳಿ ಒಟ್ಟು 66 ಕೆಜಿಯ 39 ಲಕ್ಷ ಮೌಲ್ಯದ ಬೆಳ್ಳಿ (Silver) ವಶಕ್ಕೆ ಪಡೆಯಲಾಗಿದೆ. ತಹಶೀಲ್ದಾರ್ ಡಾ. ಅಶ್ವತ್ ಟೋಲ್ ಸಿಬ್ಬಂದಿಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ನಿಷೇಧಿತ ಪಿಎಫ್‍ಐನ ಇಬ್ಬರು ಮುಖಂಡರ ಬಂಧನ

ಬಿಎಂಡಬ್ಲ್ಯು ಕಾರ್ (BMW Car) ನಲ್ಲಿ ಚಾಲಕ ದಾಖಲೆ ಇಲ್ಲದೆ ಬೆಳ್ಳಿ ಸಾಗಿಸುತ್ತಿದ್ದನು. ಈ ವೇಳೆ ಚುನಾವಣೆ ಅಧಿಕಾರಿ ಅಶ್ವತ್ ತಪಾಸಣೆ ನಡೆಸಿದಾಗ ಬೆಳ್ಳಿ ಪತ್ತೆಯಾಗಿದೆ. ಇದಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣ ಬೆಳ್ಳಿ ಮತ್ತು ಕಾರನ್ನು ವಶಕ್ಕೆ ಪಡೆದಿದ್ದಾರೆ.

ಬೋನಿ ಕಪೂರ್ ಕುಟುಂಬಕ್ಕೆ ಸೇರಿದ ಬೆಳ್ಳಿ ಹಾಗೂ ಕಾರ್ ಇದಾಗಿದ್ದು, ಆದ್ರೆ ಕಾರಿನಲ್ಲಿ ಅವರು ಇರಲಿಲ್ಲ. ಬೆಳ್ಳಿ ವಸ್ತುಗಳು ಅವರ ಕುಟುಂಬಕ್ಕೆ ಸೇರಿದ್ದಾಗೆ ಎಂದು ಡಾ. ಅಶ್ವಥ್ ಮಾಹಿತಿ ನೀಡಿದ್ದಾರೆ.

ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article