ಬೆಳಗಾವಿಯಲ್ಲೇ 3,458 ಕೋಟಿ ಬಾಕಿ, ಪಾವತಿಸದಿದ್ರೆ ಬೆಂಗಳೂರಿನಲ್ಲಿ ಕುಟುಂಬದರೊಂದಿಗೆ ಪ್ರತಿಭಟನೆ: ಗುತ್ತಿಗೆದಾರರ ಸಂಘ

1 Min Read

ಬೆಳಗಾವಿ: ಜಿಲ್ಲೆಯಲ್ಲಿ ಗುತ್ತಿಗೆದಾರರ 3,458 ಕೋಟಿ ರೂ. ಹಣ ಬಾಕಿ ಇದೆ ಎಂದು ಗುತ್ತಿಗೆದಾರರ ಸಂಘದ (Contractors Association) ರಾಜ್ಯಾಧ್ಯಕ್ಷ ಮಂಜುನಾಥ್‌ (Manjunath) ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಶೀಘ್ರದಲ್ಲೇ ಬಾಕಿ ಹಣ ಬಿಡುಗಡೆ ಮಾಡಬೇಕು. ಇಲ್ಲದೇ ಇದ್ದರೆ ಕುಟುಂಬ ಸದಸ್ಯರ ಜೊತೆಗೆ ಬೆಂಗಳೂರಿನಲ್ಲಿ (Bengaluru) ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನೀರಾವರಿ ನಿಗಮದಿಂದ 1,880 ಕೋಟಿ ರೂ., ಲೋಕೋಪಯೋಗಿ ಇಲಾಖೆ 364 ಕೋಟಿ ರೂ., ಸಣ್ಣ ನೀರಾವರಿ ಇಲಾಖೆ- 290 ಕೋಟಿ ರೂ., ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ 198 ಕೋಟಿ ರೂ. ಹಣ ಬಾಕಿ ಇದೆ ಎಂದರು. ಇದನ್ನೂ ಓದಿ: ನಾಳೆ ಸಾರಿಗೆ ಮುಷ್ಕರ ಇಲ್ಲ| ಸರ್ಕಾರಕ್ಕೆ ಮತ್ತೊಂದು ಡೆಡ್‌ಲೈನ್‌ – ಇಂದು ಏನಾಯ್ತು?

 

 ಬಿಜೆಪಿ ಅವಧಿಗಿಂತ ಸದ್ಯ ಹೆಚ್ಚು ಭ್ರಷ್ಟಾಚಾರವಿದೆ. ಅಂದು ಕೆಂಪಣ್ಣ 40 ಪರ್ಸಂಟ್ ಎಂದು ಆರೋಪ‌ ಮಾಡಿ ಸಂಕಷ್ಟಕ್ಕೆ ಸಿಲುಕಿದ್ವಿ ಈಗ ಎಷ್ಟು ಪರ್ಸೆಂಟ್‌ ಅಂತಾ ನಾನು ಈಗಲೇ ಹೇಳಲ್ಲ. ಆದರೆ ಹಿಂದಿನಗಿಂತ ಈಗ ಭ್ರಷ್ಟಾಚಾರ (Corruption) ಹೆಚ್ಚಾಗಿದೆ ಎಂದು ದೂರಿದರು.

ಈಗ ಸ್ಪೆಷಲ್ ಎನ್‌ಒಸಿ ಹುಟ್ಟಿದ್ದು ಇಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಅದರಲ್ಲೂ ನಗರಾಭಿವೃದ್ಧಿ ಇಲಾಖೆಯಲ್ಲಿ ಅತೀ ಹೆಚ್ಚು ಬಾಕಿ ಇದ್ದು ಬಜೆಟ್ ಒಳಗೆ ಎಲ್ಲಾ ಬಾಕಿಯನ್ನು ಪಾವತಿ ಮಾಡುವಂತೆ ಒತ್ತಾಯಿಸಿದರು.

Share This Article