ನವದೆಹಲಿ: ಬೆಂಗಳೂರು (Bengaluru) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport) 2020 ರಿಂದ ಇಲ್ಲಿಯವರೆಗೆ 343 ಬಾರಿ ಪಕ್ಷಿಗಳು (Bird Hit Incidents) ವಿಮಾನಗಳಿಗೆ ಡಿಕ್ಕಿ ಹೊಡೆದಿವೆ ಎಂದು ಕೇಂದ್ರ ಸರ್ಕಾರ (Union Government) ಹೇಳಿದೆ.
ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ (Murlidhar Mohol) ಅವರು ರಾಜ್ಯಸಭೆಗೆ (Rajya Sabha) ಈ ಮಾಹಿತಿ ನೀಡಿದ್ದಾರೆ. ಭಾರತದಲ್ಲಿರುವ ಪ್ರಮುಖ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ಅತಿ ಹೆಚ್ಚು ಬಾರಿ ಪಕ್ಷಿಗಳು ಡಿಕ್ಕಿ ಹೊಡೆದಿವೆ. 2020 ರಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ 695 ಬಾರಿ ಪಕ್ಷಿಗಳು ವಿಮಾನಕ್ಕೆ ಡಿಕ್ಕಿಯಾಗಿವೆ.
ದೆಹಲಿಯ ಬಳಿಕ ಮುಂಬೈ (407), ಮೂರನೇ ಸ್ಥಾನದಲ್ಲಿ ಅಹಮದಾಬಾದ್ (337) ಮತ್ತು ನಾಲ್ಕನೇ ಸ್ಥಾನದಲ್ಲಿ ಬೆಂಗಳೂರು (343) ಇದೆ. ದೇಶದ ಅತಿದೊಡ್ಡ ವಿಮಾನ ನಿಲ್ದಾಣ ಆಗಿರುವ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವರ್ಷ ಜೂನ್ ವರೆಗೆ 41 ಬಾರಿ ಪಕ್ಷಿಗಳು ಡಿಕ್ಕಿ ಹೊಡೆದಿವೆ. 2023 ರಲ್ಲಿ 185, 2022 ರಲ್ಲಿ 183, 2024 ರಲ್ಲಿ 130 ಬಾರಿ ಪಕ್ಷಿ ಡಿಕ್ಕಿ ಪ್ರಕರಣ ವರದಿಯಾಗಿದೆ. ಇದನ್ನೂ ಓದಿ: ಮಾವು ಖರೀದಿ ಮಿತಿ 200 ಕ್ವಿಂಟಾಲ್‌ಗೆ ವಿಸ್ತರಣೆ
ವಿಶೇಷವಾಗಿ ವಿಮಾನ ಟೇಕಾಫ್ ಮತ್ತು ಲ್ಯಾಂಡಿಂಗ್ ಹಂತದಲ್ಲಿ ಪಕ್ಷಿಗಳು ಡಿಕ್ಕಿಯಾಗುತ್ತವೆ. ಪಕ್ಷಿ ಡಿಕ್ಕಿಯಾಗುವುದನ್ನು ತಪ್ಪಿಸಲು ವಿಮಾನ ನಿಲ್ದಾಣಗಳು ಹಲವಾರು ಕ್ರಮಗಳನ್ನು ಕೈಗೊಂಡಿವೆ. ಇದನ್ನೂ ಓದಿ: ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದರೆ ಏನಾಗುತ್ತೆ?
ವಿಮಾನ ನಿಲ್ದಾಣದ ಬಳಿ ಮನೆ ಮತ್ತು ಅಡುಗೆ ತ್ಯಾಜ್ಯವನ್ನು ಎಸೆಯುವುದನ್ನು ತಪ್ಪಿಸಬೇಕು ಮತ್ತು ಪಕ್ಷಿಗಳು ಮತ್ತು ಪಾರಿವಾಳಗಳಿಗೆ ಆಹಾರವನ್ನು ನೀಡಬಾರದು ಎಂದು ಹೇಳಿವೆ. ಆಹಾರ ಹಾಕಿದಾಗ ಮತ್ತು ತ್ಯಾಜ್ಯ ಎಸೆದಾಗ ಅವುಗಳನ್ನು ತಿನ್ನಲು ಪಕ್ಷಿಗಳು ಹಾರುತ್ತಾ ಬರುವುದಿಂದ ವಿಮಾನಗಳಿಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಹೆಚ್ಚಿರುತ್ತದೆ.
ತೆರೆದ ಪ್ರದೇಶಗಳಲ್ಲಿ ಪ್ರಾಣಿಗಳನ್ನು ಮಾಂಸಕ್ಕಾಗಿ ವಧಿಸಬಾರದು. ಮುಖ್ಯವಾಗಿ ಖಾಲಿ ಇರುವ ಕಟ್ಟಡಗಳಿದ್ದಲ್ಲಿ ತಿಳಿಸಬೇಕು ಎಂದು ವಿಮಾನ ನಿಲ್ದಾಣಗಳು ಆಗಾಗ ಮನವಿ ಮಾಡುತ್ತಿರುತ್ತವೆ. ಕಟ್ಟಡಗಳು ಖಾಲಿ ಇದ್ದಲ್ಲಿ ಬಾವಲಿಗಳು ಆ ಜಾಗಕ್ಕೆ ಬರುವ ಸಾಧ್ಯತೆಗಳಿರುತ್ತವೆ.