ಹಾವೇರಿ: 3,200 ವರ್ಷಗಳ ಹಿಂದಿನ ಆದಿ ಮಾನವರ ಸಮಾಧಿ (Tomb Of Early Humans) ಪತ್ತೆಯಾದ ಘಟನೆ ಹಾವೇರಿ (Haveri) ಜಿಲ್ಲೆ ರಾಣೇಬೆನ್ನೂರು (Ramebennur) ತಾಲೂಕಿನ ಬಸಲಿಕಟ್ಟಿ ತಾಂಡಾದ ಬಳಿ ಪತ್ತೆಯಾಗಿದೆ.
3,200 ವರ್ಷಗಳ ಹಿಂದಿನ ಆದಿ ಮಾನವರ ಸಮಾಧಿ ಮಾಡಲಾಗುತ್ತಿತ್ತು. ಅದರ ಗುರುತುಗಳು ಮರು ಅನ್ವೇಷಣೆಗೊಂಡಿವೆ. ರಾಣೇಬೆನ್ನೂರಿನ ಇತಿಹಾಸ ಸಂಶೋದಕ ಪ್ರಮೋದ್ ನಲವಾಗಲು ಸ್ಥಳ ಗುರುತಿಸಿ ಪತ್ತೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ಸಿಕ್ಕ ಕುರುಹುಗಳು ಮೆಗಾಲಿಥಿಕ್ (ಮಹಾಶಿಲಾಯುಗ) ಸಂಸ್ಕೃತಿಗೆ ಸೇರಿದ ಸಮಾಧಿಗಳು ಎನ್ನಲಾಗಿದೆ. ಇದನ್ನೂ ಓದಿ: ಎರಡು ಕುಟುಂಬದ ಮಧ್ಯೆ ಆಸ್ತಿ ವೈಷಮ್ಯ – ಅಪ್ರಾಪ್ತನಿಂದ ವ್ಯಕ್ತಿಯ ಕೊಲೆ
ಇನ್ನು ಈ ಪ್ರದೇಶದಲ್ಲಿ ಕಲ್ಲಿನ ರಚನೆಗಳು ಪತ್ತೆಯಾಗಿದ್ದು, ಇವು ಆ ಭಾಗದ ಪ್ರಾಚೀನ ಮಾನವ ವಾಸಸ್ಥಳವನ್ನು ಸೂಚಿಸುತ್ತವೆ ಎನ್ನಲಾಗಿದೆ. ಇನ್ನಷ್ಟು ಉತ್ಖನನ ಕಾರ್ಯ ಮಾಡಿ ಇನ್ನಷ್ಟು ಇತಿಹಾಸ ಕುರುಹುಗಳು ಪತ್ತೆ ಮಾಡಬೇಕಿದೆ. ಇದನ್ನೂ ಓದಿ: KSOU ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಆರೋಪ – ಸರ್ಕಾರಕ್ಕೆ ಪತ್ರ ಬರೆದು ವಿವಿ ಕುಲಪತಿಗಳಿಂದ ಸ್ಪಷ್ಟನೆ


