ಸೊಮಾಲಿಯಾದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ – 32 ಮಂದಿ ಸಾವು

Public TV
1 Min Read

ಮೊಗಾದಿಶು: ಅಲ್‌-ಶಬಾಬ್‌ ಆತ್ಮಾಹುತಿ ಬಾಂಬರ್‌ ಮತ್ತು ಬಂದೂಕುಧಾರಿಗಳು ಸೊಮಾಲಿಯಾ (Somalia) ರಾಜಧಾನಿ ಮೊಗಾದಿಶುವಿನಲ್ಲಿ ನಡೆಸಿದ ದಾಳಿಯಲ್ಲಿ 32 ಮಂದಿ ಸಾವಿಗೀಡಾಗಿದ್ದಾರೆ.

ಅಲ್‌ಖೈದಾ ಬೆಂಬಲಿತ ಜಿಹಾದಿಗಳು 17 ವರ್ಷಗಳಿಗೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಬೆಂಬಲಿತ ಫೆಡರಲ್ ಸರ್ಕಾರದ ವಿರುದ್ಧ ದಂಗೆ ನಡೆಸುತ್ತಿದ್ದಾರೆ. ಜನಪ್ರಿಯವಾಗಿರುವ ಲಿಡೋ ಬೀಚ್ ಪ್ರದೇಶವನ್ನು ಗುರಿಯಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ಮೇಲಿನ ದಾಳಿಯ ಮಾಸ್ಟರ್‌ಮೈಂಡ್‌ ಮೊಹಮ್ಮದ್‌ ಡೀಫ್‌ ಹತ್ಯೆ

ಈ ದಾಳಿಯಲ್ಲಿ 32 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ. ಸುಮಾರು 63 ಜನರು ಗಾಯಗೊಂಡಿದ್ದಾರೆ. ಅವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದಾರೆ ಎಂದು ಪೊಲೀಸ್ ವಕ್ತಾರ ಅಬ್ದಿಫತಾ ಆದಾನ್ ಹಸನ್‌ ತಿಳಿಸಿದ್ದಾರೆ.

ದಾಳಿ ಶುಕ್ರವಾರ ತಡರಾತ್ರಿ ನಡೆದಿದ್ದು, ಅಲ್‌-ಶಬಾಬ್‌ ಹೊಣೆಗಾರಿಕೆ ಹೊತ್ತುಕೊಂಡಿದೆ. ಆತ್ಮಹತ್ಯಾ ಬಾಂಬರ್ ಸಾಧನವನ್ನು ಸ್ಫೋಟಿಸಿದಾಗ, ಬಂದೂಕುಧಾರಿಗಳು ಈ ಪ್ರದೇಶಕ್ಕೆ ನುಗ್ಗಿದರು ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಬರಿದಾಗ್ತಿದೆ ಆಮ್ಲಜನಕ.. ಜೀವಸಂಕುಲಕ್ಕೆ ಕಂಟಕ – ಭೂಮಿಯಲ್ಲಿ ಏನಾಗ್ತಿದೆ?

Share This Article