ಒಂದೇ ಬೈಕ್ ಮೇಲೆ 300 ಕೇಸ್ – ಬರೋಬ್ಬರಿ 3 ಲಕ್ಷ ದಂಡ

Public TV
1 Min Read

– ಸಿಲಿಕಾನ್ ಸಿಟಿಯಲ್ಲಿ ಅತಿ ಹೆಚ್ಚು ಸಂಚಾರಿ ನಿಯಮ ಉಲ್ಲ‌ಂಘನೆ ಮಾಡಿರೋ ಬೈಕ್ ಇದು

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಸಿಲಿಕಾನ್‌ ಸಿಟಿಯ ಬೈಕ್‌ವೊಂದರ ಮೇಲೆ ಬರೋಬ್ಬರಿ 300 ಪ್ರಕರಣ ದಾಖಲಾಗಿದ್ದು, ಒಟ್ಟು 3 ಲಕ್ಷ ರೂ. ದಂಡ ಬಿದ್ದಿದೆ. ಬೆಂಗಳೂರಲ್ಲಿ ಅತಿ ಹೆಚ್ಚು ಸಂಚಾರಿ ನಿಯಮ ಉಲ್ಲಂಘಿಸಿದ ಬೈಕ್‌ ಇದು ಎಂಬ ಕುಖ್ಯಾತಿಯನ್ನೂ ಪಡೆದಿದೆ.

ಬೈಕ್ ಬೆಲೆ 30,000 ರೂ., ಆದರೆ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿರೋದರಲ್ಲಿ ಬೆಂಗಳೂರಿಗೆ ಮೊದಲನೇಯವರು ಸುಧಾಮ ನಗರದ ವೆಂಕಟರಮನ್. ಇವರ, KA05KF7969 ನಂಬರಿನ ಆಕ್ಟಿವಾ ಹೊಂಡಾ ಬೈಕ್‌ನ ಮೇಲೆ ಬರೋಬ್ಬರಿ 300 ಕೇಸ್‌ಗಳು ದಾಖಲಾಗಿದೆ. ಇದನ್ನೂ ಓದಿ: ಹೊಸಕೋಟೆ ಸಮೀಪ ಸರಣಿ ಅಪಘಾತ – ಸ್ಥಳದಲ್ಲೇ ಯುವತಿ ದಾರುಣ ಸಾವು!

ಸಂಚಾರಿ ನಿಯಮ ಉಲ್ಲಂಘನೆ ಮಾಡಿ 300 ಕೇಸ್ ಹಾಕಿಸಿಕೊಂಡಿರುವ ವೆಂಕಟರಮನ್‌ ನಗರದಲ್ಲಿ ನಂಬರ್ ಒನ್ ಸಂಚಾರಿ ನಿಯಮ ಉಲ್ಲಂಘನೆ ಮಾಡಿರೋ ಅಪಖ್ಯಾತಿಗೆ ಒಳಾಗಿದ್ದಾರೆ. ಒನ್ ವೇ ಸಂಚಾರ, ಸಿಗ್ನಲ್ ಜಂಪ್, ‌ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಲಾವಣೆ, ಫುಟ್‌ಪಾಥ್ ರೈಡಿಂಗ್.. ಪೊಲೀಸ್ ಮ್ಯಾನ್ಯೂವಲ್‌ನಲ್ಲಿ ಯಾವ್ಯಾವ ಕಾನೂನುಗಳು ಉಲ್ಲಂಘನೆ ಎಂದು ಎನಿಸಿಕೊಳ್ಳುತ್ತೋ ಅದೆಲ್ಲಾ ಈ ವೆಂಕಟರಾಮನ್ ಮಾಡಿಬಿಟ್ಟಿದ್ದಾರೆ.

ಎಸ್.ಆರ್ ನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ಹಲವೆಡೆ ಸಂಚಾರ ನಿಯಮ ಉಲ್ಲಂಘನೆ ಮಾಡಿರೋದು ಸಿಗ್ನಲ್‌ನಲ್ಲಿರೋ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ವೆಂಕಟರಮನ್‌ ಬೈಕ್ ಮೇಲೆ 300 ಕೇಸ್‌ಗಳಿಂದ ಒಟ್ಟು ದಂಡದ ಮೊತ್ತ 3,20,000 ರೂ. ಇದೆ. ಇದನ್ನೂ ಓದಿ: ಹೆಣ್ಣು ಭ್ರೂಣ ಹತ್ಯೆ ಪ್ರಕರಣ – ಸಿಐಡಿಯಿಂದ ಆರೋಗ್ಯ ಇಲಾಖೆಗೆ ವರದಿ ಕೊಡಲು ಸಿದ್ಧತೆ

ಬೈಕ್ ಮೇಲಿರುವ ಕೇಸ್ ಪರಿಶೀಲನೆ ಮಾಡಿ, ವಿಲ್ಸನ್ ಗಾರ್ಡನ್‌ನ ಸುಧಾಮ ನಗರದಲ್ಲಿರುವ ವೆಂಕಟರಮನ್ ಮನೆಗೆ ಸಂಚಾರಿ ಪೊಲೀಸರು ನೋಟಿಸ್ ನೀಡಿದ್ದಾರೆ.

Share This Article